ಕರ್ನಾಟಕ

karnataka

ETV Bharat / bharat

ಕಾಶ್ಮೀರದಲ್ಲೂ ಅಪ್ನಾ ತಿರಂಗಾ ಲೇಹ್ರಾಯ... ಟ್ವೀಟ್​ ಮಾಡಿ ಸಂಭ್ರಮಿಸಿದ ಗೌತಮ್​ ಗಂಭೀರ್​!

ಕಾಶ್ಮೀರದಲ್ಲೂ ಅಪ್ನಾ ತಿರಂಗಾ ಲೇಹ್ರಾಯ... ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್​ 370 ರದ್ದುಗೊಳ್ಳುತ್ತಿದ್ದಂತೆ ಬಿಜೆಪಿ ಸಂಸದ ಗೌತಮ್​ ಗಂಭೀರ್​ ಟ್ವೀಟ್​ ಮಾಡಿ ಸಂಭ್ರಮ ಹೊರಹಾಕಿದ್ದಾರೆ.

ಗೌತಮ್​ ಗಂಭೀರ್​/Gautam Gambhir

By

Published : Aug 5, 2019, 4:00 PM IST

ನವದೆಹಲಿ:ಕಣಿವೆ ನಾಡು ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್​ 370 ರದ್ದುಗೊಳಿಸಲಾಗಿದ್ದು, ಬಾಲಿವುಡ್​ ಸ್ಟಾರ್ಸ್​ ಸೇರಿ ಅನೇಕರು ಇದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಟ್ವೀಟ್​ ಮಾಡಿರುವ ಟೀಂ ಇಂಡಿಯಾ ಆರಂಭಿಕ ಮಾಜಿ ಆಟಗಾರ ಹಾಗೂ ಬಿಜೆಪಿ ಸಂಸದ ಗೌತಮ್​ ಗಂಭೀರ್​, ಯಾರು ಮಾಡಲು ಸಾಧ್ಯವಾಗದೇ ಇರುವುದನ್ನ ನಾವು ಮಾಡಿ ತೋರಿಸಿದ್ದೇವೆ. ಕಾಶ್ಮೀರದಲ್ಲೂ ಇನ್ಮುಂದೆ ನಮ್ಮ ತ್ರಿವರ್ಣ ಧ್ವಜ ಹಾರಾಡಲಿದೆ. ಜೈ ಹಿಂದೆ, ಅಭಿನಂಧನೆಗಳು ಭಾರತ, ಕಾಶ್ಮೀರ್​ ಮುಬಾರಕ್ ಎಂದು ಬರೆದುಕೊಂಡಿದ್ದಾರೆ.

ಆರ್ಟಿಕಲ್​ 370 ರದ್ದು ಮಾಡಿರುವುದಾಗಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಮಾಹಿತಿ ನೀಡಿದ್ದು, ಇನ್ಮುಂದೆ ಅದು ರಾಜ್ಯವಾಗಿರದೇ ಕೇಂದ್ರಾಡಳಿತ ಪ್ರದೇಶವಾಗಿರಲಿದೆ. ಈಗಾಗಲೇ ಈ ನಿರ್ಧಾರಕ್ಕೆ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅಂಕಿತ ಹಾಕಿದ್ದು, ಐಎಡಿಎಂಕೆ, ಎಎಪಿ, ವೈಎಸ್​ಆರ್​ಪಿ, ಬಿಜು ಜನತಾದಳ ಹಾಗೂ ಬಿಎಸ್​ಪಿ ಪಕ್ಷಗಳು ಕೇಂದ್ರದ ನಿರ್ಧಾರಕ್ಕೆ ಬೆಂಬಲ ನೀಡಿವೆ.

ಇನ್ನು ಕಾಶ್ಮೀರ ಕ್ರಿಕೆಟ್​ ತಂಡದ ಮೆಂಟರ್​ ಆಗಿ ಕಾರ್ಯನಿರ್ವಹಿಸುತ್ತಿದ್ದ ಇರ್ಫಾನ್ ಪಠಾಣ್​, 'ನಾನು ಕಾಶ್ಮೀರ ತೊರೆದಿದ್ದರೂ ನನ್ನ ಮನಸ್ಸು ಮತ್ತು ಹೃದಯ ಕಾಶ್ಮೀರದಲ್ಲಿದೆ. ನಾನು ನಮ್ಮ ಭಾರತೀಯ ಸೇನೆ ಮತ್ತು ಕಾಶ್ಮೀರದ ಸಹೋದರ, ಸಹೋದರಿಯರೊಂದಿಗಿದ್ದೇನೆ' ಎಂದು ಟ್ವೀಟ್​ ಮಾಡಿದ್ದಾರೆ.

ABOUT THE AUTHOR

...view details