ನವದೆಹಲಿ:ಎರಡು ದಿನಗಳ ಕಾಲ ಭಾರತದ ಪ್ರವಾಸ ಕೈಗೊಂಡಿದ್ದ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್, ಕಾಶ್ಮೀರ ಗಡಿ ಸಮಸ್ಯೆ ಬಗ್ಗೆ ಯಾವುದೇ ರೀತಿ ಮಾತುಕತೆ ನಡೆಸಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ತಿಳಿಸಿದ್ದಾರೆ.
ಕಾಶ್ಮೀರ ಬಗ್ಗೆ ಚಕಾರವೆತ್ತದ ಚೀನಾ; ಮುಂದಿನ ಶೃಂಗಸಭೆಗೆ ಮೋದಿಗೆ ಆಹ್ವಾನ - ಪಾಕ್ ಪ್ರಧಾನಿ ಚೀನಾ ಭೇಟಿ ಬಗ್ಗೆ ಕ್ಸಿ ಪ್ರಸ್ತಾಪ
ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿ ವೇಳೆ ಜಮ್ಮುಕಾಶ್ಮೀರ ಗಡಿ ವಿಚಾರವಾಗಿ ಯಾವುದೇ ರೀತಿಯ ಮಾತುಕತೆ ನಡೆದಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ತಿಳಿಸಿದ್ದಾರೆ.
ಕ್ಸಿ ಜಿನ್ಪಿಂಗ್-ನರೇಂದ್ರ ಮೋದಿ
ಉಭಯ ನಾಯಕರ ಭೇಟಿ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಗೋಖಲೆ, ಎರಡು ದಿನಗಳ ಭೇಟಿ ವೇಳೆ ಚೀನಾ ಅಧ್ಯಕ್ಷರು ಜಮ್ಮುಕಾಶ್ಮೀರ ವಿಷಯ ಪ್ರಸ್ತಾಪಿಸಿಲ್ಲ. ಇದೊಂದು ಆತಂಕಕಾರಿ ವಿಚಾರವಾಗಿದೆ ಎಂದ ಅವರು, ಕೇವಲ ಪಾಕ್ ಪ್ರಧಾನಿ ಚೀನಾ ಭೇಟಿ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ ಎಂದಿದ್ದಾರೆ.
ಮಾತುಕತೆ ವೇಳೆ ಉಭಯ ದೇಶದ ನಾಯಕರು ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸಲು ಒಟ್ಟಿಗೆ ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು. ಜತೆಗೆ ಮುಂದಿನ ಉಭಯ ದೇಶಗಳ ಶೃಂಗಸಭೆಯಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿಯವರನ್ನು ಕ್ಸಿ ಜಿನ್ಪಿಂಗ್ ಚೀನಾಗೆ ಆಹ್ವಾನಿಸಿದ್ದಾರೆ ಎಂದು ಗೋಖಲೆ ತಿಳಿಸಿದ್ರು.