ಕರ್ನಾಟಕ

karnataka

ETV Bharat / bharat

ಭಾರತ-ಪಾಕ್ ಕಾಶ್ಮೀರ ವಿವಾದ ಬಗೆಹರಿಸಿಕೊಳ್ಳಲಿ! ಚೀನಾ ವರಸೆ ಬದಲಿಸಿದ್ದೇಕೆ? - ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್

ಜಮ್ಮು-ಕಾಶ್ಮೀರ ವಿಚಾರದಲ್ಲಿ ಸದಾ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಾ ಬಂದಿರುವ ಚೀನಾ ಇದೀಗ ತನ್ನ ವರಸೆ ಬದಲಿಸಿಕೊಂಡಿದೆ.

ನರೇಂದ್ರ ಮೋದಿ, ಕ್ಸಿ ಜಿನ್‌ಪಿಂಗ್

By

Published : Oct 8, 2019, 11:38 PM IST

ನವದೆಹಲಿ:ಈ ಹಿಂದಿನಿಂದಲೂ ಜಮ್ಮು-ಕಾಶ್ಮೀರ ವಿಚಾರದಲ್ಲಿ ಪಾಕ್​ಗೆ ಸಾಥ್​ ನೀಡುತ್ತಾ ಬರುತ್ತಿರುವ ಡ್ರ್ಯಾಗನ್​ ದೇಶ ಚೀನಾ, ಕೇಂದ್ರ ಸರ್ಕಾರದ ಆರ್ಟಿಕಲ್​ 370 ರದ್ಧತಿ ವೇಳೆಯೂ ವಿಶ್ವಸಂಸ್ಥೆಯಲ್ಲಿ ಪಾಕ್​ ಬೆಂಬಲಿಸಿದೆ. ಆದ್ರೀಗ ಪ್ರಧಾನಿ ಮೋದಿ ಭೇಟಿ ಮಾಡಲು ಅಲ್ಲಿನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭಾರತಕ್ಕೆ ಬರುತ್ತಿದ್ದು ರಾಗ ಬದಲಿಸಿದೆ.

ಭಾರತದ ಜತೆ ದ್ವಿಪಕ್ಷೀಯ ಮಾತುಕತೆಗಾಗಿ ಅಕ್ಟೋಬರ್​​​ 11 ಮತ್ತು 12ರಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಆಗಮಿಸುತ್ತಿದ್ದು, ಈ ವೇಳೆ ಜಮ್ಮುಕಾಶ್ಮೀರ ವಿಚಾರವಾಗಿ ಮಾತನಾಡಿರುವ ಚೀನಾ, ಕಾಶ್ಮೀರ ವಿವಾದ ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಮಸ್ಯೆಯಾಗಿದ್ದು ನಾವು ಮಧ್ಯಸ್ಥಿಕೆ ವಹಿಸುವುದಿಲ್ಲ ಎಂದಿದೆ.

ಇಮ್ರಾನ್​ ಖಾನ್​, ಕ್ಸಿ ಜಿನ್‌ಪಿಂಗ್

ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದ ವೇಳೆ ಅಲ್ಲಿನ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಮಾತನಾಡಿದ್ದಾರೆ. ಚೀನಾ ಅಧ್ಯಕ್ಷ ಭಾರತಕ್ಕೆ ಭೇಟಿ ನೀಡುವ ಸಂದರ್ಭದಲ್ಲೇ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಚೀನಾ ಪ್ರವಾಸದಲ್ಲಿರುವ ಕಾರಣ, ಜಮ್ಮು-ಕಾಶ್ಮೀರ ವಿಚಾರ ಹೆಚ್ಚು ಮಹತ್ವ ಪಡೆದುಕೊಂಡಿದೆ. ಆದರೆ ಈ ವಿಷಯದಲ್ಲಿ ತಾನು ಯಾವುದೇ ಕಾರಣಕ್ಕೂ ಮಧ್ಯಸ್ಥಿಕೆ ವಹಿಸುವುದಿಲ್ಲ ಎಂದು ಚೀನಾ ಇದೀಗ ಹೇಳಿದೆ.

ABOUT THE AUTHOR

...view details