ಕರ್ನಾಟಕ

karnataka

ETV Bharat / bharat

ಕಾಶ್ಮೀರದ ಬಿಸಿನೀರಿನ ಬುಗ್ಗೆಗಳಲ್ಲಿದೆ ಔಷಧೀಯ ಶಕ್ತಿ: ಮಿಂದೆದ್ದರೆ ಸಕಲ ರೋಗಗಳಿಂದ ಮುಕ್ತಿ - Kashmir hot springs have medicinal properties

ಅತ್ಯಂತ ಜನಪ್ರಿಯ ಬಿಸಿನೀರಿನ ಬುಗ್ಗೆಗಳು ಲಡಾಖ್ ಮತ್ತು ಕಿಶ್ತ್ವಾರ್ ಮತ್ತು ರಾಜೌರಿ ಜಿಲ್ಲೆಗಳಲ್ಲಿವೆ. ಈ ಬುಗ್ಗೆಗಳ ನೀರಿಗೆ ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ ಎಂದು ಜನರು ನಂಬಿದ್ದಾರೆ. ಈ ಬುಗ್ಗೆಗಳ ನೀರು ಚರ್ಮದ ಕಾಯಿಲೆಗಳು ಮತ್ತು ಕೀಲು ನೋವುಗಳನ್ನು ವಾಸಿ ಮಾಡುವ ಔಷಧೀಯ ಗುಣಹೊಂದಿವೆ ಎನ್ನುತ್ತಾರೆ ಜನರು.

ಕಾಶ್ಮೀರದ ಬಿಸಿನೀರಿನ ಬುಗ್ಗೆಗಳಲ್ಲಿದೆ ಔಷಧೀಯ ಶಕ್ತಿ
ಕಾಶ್ಮೀರದ ಬಿಸಿನೀರಿನ ಬುಗ್ಗೆಗಳಲ್ಲಿದೆ ಔಷಧೀಯ ಶಕ್ತಿ

By

Published : Oct 28, 2020, 6:03 AM IST

ಕಿಶ್ತ್ವಾರ್:ಜಮ್ಮು-ಕಾಶ್ಮೀರ ನಿಸರ್ಗ ಸೌಂದರ್ಯ ಮತ್ತು ಸುಂದರವಾದ ಪ್ರವಾಸಿ ತಾಣಗಳಿಗೆ ವಿಶ್ವಪ್ರಸಿದ್ಧ. ಇಲ್ಲಿನ ತಾಜಾ ಮತ್ತು ಸ್ವಚ್ಛವಾದ ಬಿಸಿನೀರಿನ ಬುಗ್ಗೆಗಳು ರಾಜ್ಯದ ನೈಸರ್ಗಿಕ ಸಂಪನ್ಮೂಲಗಳಲ್ಲಿ ಒಂದಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಸರೋವರಗಳು, ನದಿಗಳು, ಬುಗ್ಗೆಗಳು, ಉಪನದಿಗಳು ಮತ್ತು ಹಿಮನದಿಗಳು ಹೇರಳವಾಗಿವೆ. ಕಾಶ್ಮೀರದ ಸ್ಥಳೀಯ ಭಾಷೆಯಲ್ಲಿ ಇದನ್ನು ತಟ್ಟಪಾನಿ ಎಂದು ಕರೆಯಲಾಗುತ್ತದೆ. ಬಿಸಿ ನೀರಿನ ಬುಗ್ಗೆಗಳನ್ನು ಜಲವಿದ್ಯುತ್ ಮತ್ತು ಭೂಶಾಖದ ಬುಗ್ಗೆಗಳೆಂದೂ ಕೂಡಾ ಕರೆಯಲಾಗುತ್ತದೆ. ಜಮ್ಮು, ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಅಂದಾಜು ಇಪ್ಪತ್ತರಷ್ಟು ಬಿಸಿನೀರಿನ ಬುಗ್ಗೆಗಳು ಕಾಣಸಿಗುತ್ತವೆ. ಈ ಬುಗ್ಗೆಗಳು ಭೂಮಿಯ ಕೆಳಗೆ ಪಾಪ್ ಅಪ್ ಆಗುತ್ತವೆ ಮತ್ತು ಅವುಗಳಲ್ಲಿ ಹೆಚ್ಚಿನವು ಮೆಗ್ನೀಷಿಯಮ್, ಪೊಟ್ಯಾಸಿಯಮ್, ಸೋಡಿಯಂ ಮತ್ತು ಗಂಧಕದ ಕರಗಿದ ರಾಸಾಯನಿಕಗಳನ್ನು ಒಳಗೊಂಡಿರುತ್ತವೆ. ಇದು ಔಷಧೀಯ ಗುಣಗಳನ್ನು ಹೊಂದಿರುತ್ತವೆ.

ಕಾಶ್ಮೀರದ ಬಿಸಿನೀರಿನ ಬುಗ್ಗೆಗಳಲ್ಲಿದೆ ಔಷಧೀಯ ಶಕ್ತಿ

ಅತ್ಯಂತ ಜನಪ್ರಿಯ ಬಿಸಿನೀರಿನ ಬುಗ್ಗೆಗಳು ಲಡಾಖ್ ಮತ್ತು ಕಿಶ್ತ್ವಾರ್ ಮತ್ತು ರಾಜೌರಿ ಜಿಲ್ಲೆಗಳಲ್ಲಿವೆ. ಈ ಬುಗ್ಗೆಗಳ ನೀರಿಗೆ ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ ಎಂದು ಜನರು ನಂಬಿದ್ದಾರೆ. ಹಾಗಾಗಿ ಅನೇಕ ಜನರು ಈ ಬಿಸಿ ನೀರಿನ ಬುಗ್ಗೆಗಳಿಗೆ ಭೇಟಿ ನೀಡುತ್ತಾರೆ. ಈ ಬುಗ್ಗೆಗಳ ನೀರು ಚರ್ಮದ ಕಾಯಿಲೆಗಳು ಮತ್ತು ಕೀಲು ನೋವುಗಳನ್ನು ವಾಸಿ ಮಾಡುವ ಔಷಧೀಯ ಗುಣ ಹೊಂದಿವೆ ಎನ್ನುತ್ತಾರೆ ಜನರು.

ಜಮ್ಮುವಿನ ಕಿಶ್ತ್ವಾರ್ ಜಿಲ್ಲೆಯ ಪಿರ್ ಪಂಜಾಲ್ ಶ್ರೇಣಿಯ ಮದ್ವಾ ವಾಡ್ವಾನ್ ಪ್ರದೇಶದಲ್ಲಿ ನೆಲೆಗೊಂಡಿರುವ ಈ ಪ್ರಸಿದ್ಧ ಬಿಸಿ ನೀರಿನ ಬುಗ್ಗೆಗೆ ಈಟಿವಿ ಭಾರತ ತಂಡ ಭೇಟಿ ನೀಡಿತು. ಈ ಪವಿತ್ರ ಬುಗ್ಗೆಯ ನೀರು ತುಂಬ ಬೆಚ್ಚಗಿರುತ್ತದೆ. ಈ ಬುಗ್ಗೆಗಳು ದೇವರ ಪವಾಡ ಅನ್ನೋದು ಜನರ ನಂಬಿಕೆಯಾಗಿದೆ. ಈ ನೀರು ಸಾವಯವ ಗಿಡಮೂಲಿಕೆ ದ್ರವವನ್ನು ಹೊಂದಿರುತ್ತದೆ ಎಂದು ಕೆಲವರು ಹೇಳುತ್ತಾರೆ. ಅಂದ ಹಾಗೆ ಈ ಸ್ಥಳ ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಪಟ್ಟಣದಿಂದ ಸುಮಾರು 150 ಕಿಲೋಮೀಟರ್ ದೂರದಲ್ಲಿದೆ. ಹಿಮಪಾತ ಸಂಭವಿಸಿದಾಗ ಇಲ್ಲಿಗೆ ರಸ್ತೆ ಸಂಪರ್ಕ ಕಡಿತಗೊಳ್ಳುವ ಪರಿಣಾಮ ಚಳಿಗಾಲದಲ್ಲಿ ಇಲ್ಲಿಗೆ ಭೇಟಿ ನೀಡಲು ಸಾಧ್ಯವಿಲ್ಲ. ಈ ಹಾಟ್ ಸ್ಪ್ರಿಂಗ್ ತಲುಪಲು ಸುಮಾರು ಐದು ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಹೋಗಬೇಕು.

ಜನರು ಬಹಳ ಸಮಯದಿಂದ ಈ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ಆದರೆ ಈ ಸ್ಥಳಕ್ಕೆ ಸರಿಯಾದ ರಸ್ತೆ ನಿರ್ಮಿಸಲು ಸರ್ಕಾರ ಮುಂದಾಗಿಲ್ಲ. ಸರ್ಕಾರವು ಈ ಸ್ಥಳದಲ್ಲಿ ಮೂಲಸೌಕರ್ಯವನ್ನು ನಿರ್ಮಿಸಬೇಕು. ಇದರಿಂದ ಹೆಚ್ಚಿನ ಜನರು ಯಾವುದೇ ತೊಂದರೆ ಇಲ್ಲದೆ ಇಲ್ಲಿಗೆ ಬರಬಹುದು ಎಂಬುದು ಪ್ರವಾಸಿಗರ ಅಭಿಪ್ರಾಯವಾಗಿದೆ.

ABOUT THE AUTHOR

...view details