ಕರ್ನಾಟಕ

karnataka

ETV Bharat / bharat

ಹಿಂದೂಗಳ ಪವಿತ್ರ ಧಾರ್ಮಿಕ ಕ್ಷೇತ್ರ 'ಮೋಕ್ಷ ನಗರಿ ಕಾಶಿ'..! - ಹಿಂದೂಗಳ ಪವಿತ್ರ ಧಾರ್ಮಿಕ ಕ್ಷೇತ್ರ 'ಮೋಕ್ಷ ನಗರಿ ಕಾಶಿ'.

ತೊಂದರೆಗೊಳಗಾದ ಆತ್ಮಗಳ ಶಾಂತಿಗಾಗಿ ಬ್ರಾಹ್ಮಣರು ಧಾರ್ಮಿಕ ಆಚರಣೆಗಳನ್ನು ಪಿಶಾಚಿ ಮೋಚನ್ ಕುಂಡ್‌ನಲ್ಲಿ ನೆರವೇರಿಸುತ್ತಾರೆ. ಇದರಿಂದ ಪೂರ್ವಜರ ಆತ್ಮಗಳಿಗೆ ಮುಕ್ತಿ ದೊರೆಯುತ್ತದೆ ಎಂದು ನಂಬಲಾಗಿದೆ..

Kashi, the holy shrine of the Hindus.
ಹಿಂದೂಗಳ ಪವಿತ್ರ ಧಾರ್ಮಿಕ ಕ್ಷೇತ್ರ 'ಮೋಕ್ಷ ನಗರಿ ಕಾಶಿ'

By

Published : Sep 13, 2020, 6:07 AM IST

Updated : Sep 13, 2020, 4:55 PM IST

ವಾರಣಾಸಿ :ಹಿಂದೂಗಳ ಪವಿತ್ರ ಧಾರ್ಮಿಕ ಕ್ಷೇತ್ರ ಕಾಶಿ. ವಿಶ್ವದ ಅತ್ಯಂತ ಹಳೆಯ ನಗರ. ಕಾಶಿ ಕ್ಷೇತ್ರದ ಕುರಿತು ಋಗ್ವೇದದಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಮೋಕ್ಷ ನಗರಿ ಎಂದೂ ಕರೆಯುತ್ತಾರೆ.

ಶಿವನು ಕಾಶಿಯಿಂದಲೇ ಬ್ರಹ್ಮಾಂಡದ ಸೃಷ್ಟಿ ಪ್ರಾರಂಭಿಸಿದನೆಂಬ ಪ್ರತೀತಿಯಿದೆ. ಕಾಶಿಯಲ್ಲಿ ಕೊನೆಯುಸಿರೆಳೆದ ವ್ಯಕ್ತಿ ಮೋಕ್ಷ ಪಡೆಯುತ್ತಾನೆ ಎಂಬ ನಂಬಿಕೆ ಬೇರೂರಿದೆ. ಇದಕ್ಕೆ ಸಾಥ್​ ನೀಡುವಂತೆ ಕಾಶಿಯ ಚೆಟ್‌ಗಂಜ್ ಪೊಲೀಸ್ ಠಾಣೆ ಬಳಿ ಪಿಶಾಚಿ ಮೋಚನ್ ಕುಂಡ್ ಇದೆ. ಇಲ್ಲಿ 'ತ್ರಿಪಿಂಡ ಶ್ರಾದ್ಧ' ನಡೆಸುವ ಮೂಲಕ ಅಕಾಲಿಕ ಮರಣ ಹೊಂದಿದವರ ಆತ್ಮಕ್ಕೆ ಶಾಂತಿ ನೀಡಬಹುದೆಂದು ಹೇಳಲಾಗುತ್ತದೆ.

ಹಿಂದೂಗಳ ಪವಿತ್ರ ಧಾರ್ಮಿಕ ಕ್ಷೇತ್ರ 'ಮೋಕ್ಷ ನಗರಿ ಕಾಶಿ'

ಕಾಶಿ ಖಂಡದ ಪ್ರಕಾರ, ಗಂಗಾ ನದಿ ಬರುವ ಮೊದಲೇ ಈ ಕುಂಡ ಭೂಮಿಯ ಮೇಲಿದೆ. ಇಲ್ಲಿ ಪ್ರಾಚೀನ ಪೀಪಲ್ ಮರವೂ ಇದೆ. ಅಲೌಕಿಕ ಅಂಶಗಳಿಂದ ತೊಂದರೆಗೊಳಗಾದ ಜನರನ್ನು ಪೀಪಲ್ ಮರದ ಕೆಳಗೆ ಕುಳಿತುಕೊಳ್ಳುವಂತೆ ಮಾಡಲಾಗುತ್ತದೆ. ಬಳಿಕ ಮರದ ಮೇಲೆ ಒಂದು ನಾಣ್ಯ ಇಡಲಾಗುತ್ತದೆ. ಇದರಿಂದಾಗಿ ಅವರ ಪೂರ್ವಜರ ಆತ್ಮಕ್ಕೆ ಶಾಂತಿ ಸಿಕ್ಕು, ಮೋಕ್ಷ ಹೊಂದುತ್ತಾರೆಂಬ ನಂಬಿಕೆ ಇದೆ.

ತೊಂದರೆಗೊಳಗಾದ ಆತ್ಮಗಳ ಶಾಂತಿಗಾಗಿ ಬ್ರಾಹ್ಮಣರು ಧಾರ್ಮಿಕ ಆಚರಣೆಗಳನ್ನು ಪಿಶಾಚಿ ಮೋಚನ್ ಕುಂಡ್‌ನಲ್ಲಿ ನೆರವೇರಿಸುತ್ತಾರೆ. ಇದರಿಂದ ಪೂರ್ವಜರ ಆತ್ಮಗಳಿಗೆ ಮುಕ್ತಿ ದೊರೆಯುತ್ತದೆ ಎಂದು ನಂಬಲಾಗಿದೆ.

Last Updated : Sep 13, 2020, 4:55 PM IST

ABOUT THE AUTHOR

...view details