ಗಾಂಧಿನಗರ(ಗುಜರಾತ್):ಗುಜರಾತ್ನ ಸರ್ದಾರ್ ವಲ್ಲಭಭಾಯಿ ಪಾಟೇಲ್ ಅವರ ಉಕ್ಕಿನ ಏಕತಾ ಪ್ರತಿಮೆಯನ್ನ ಟೈಮ್ ನಿಯತಕಾಲಿಕೆ 100 ಅತ್ಯಂತ ಅದ್ಭುತ ಸ್ಥಳಗಳಲ್ಲಿ ಒಂದು ಎಂದು ಹೆಸರಿಸಿದೆ. ಈ ಮೂಲಕ ಏಕತಾ ಪ್ರತಿಮೆಯ ಗೌರವವನ್ನ ಹೆಚ್ಚಿಸಿದೆ.
ಏಕತಾ ಪ್ರತಿಮೆ ಬಳಿ ಕನ್ನಡ ಕಂಪು.. ಕರ್ನಾಟಕ ಕರಕುಶಲ ಕಲೆಯ ಅನಾವರಣ ನಿರ್ಮಾಣವಾದ ಕಡಿಮೆ ಅವಧಿಯಲ್ಲೆ ಹೆಚ್ಚು ಪ್ರವಾಸಿಗರನ್ನ ಈ ಏಕತಾ ಪ್ರತಿಮೆ ಆಕರ್ಷಿಸಿದೆ. ಒಂದು ವರ್ಷದೊಳಗೆ ಗುಜರಾತ್ನ ಸರ್ದಾರ್ ವಲ್ಲಭಭಾಯಿ ಪಾಟೇಲ್ ಅವರ ಉಕ್ಕಿನ ಪ್ರತಿಮೆಯನ್ನು ಸುಮಾರು 26 ಲಕ್ಷ ಕ್ಕೂ ಹೆಚ್ಚು ಪ್ರವಾಸಿಗರು ವೀಕ್ಷಿಸಿದ್ದರು ಎಂದು ಈ ಹಿಂದೆ ಪ್ರಧಾನಿ ಮೋದಿ ಹೇಳಿದ್ದರು.
ಇದೀಗ ಹೆಚ್ಚು ಪ್ರವಾಸಿಗರನ್ನ ಆಕರ್ಷಿಸುತ್ತಿರುವ ಈ ಪ್ರದೇಶದಲ್ಲಿ ವಿವಿಧ ದೇಶ ಮತ್ತು ರಾಜ್ಯಗಳ ಕರಕುಶಲ ವಸ್ತುಗಳ ದೊರೆಯುತ್ತಿದ್ದು, ಅದರಲ್ಲಿ ಕರ್ನಾಟಕ ಕರಕುಶಲ ವಸ್ತುಗಳು ಕೂಡ ಸೇರಿಕೊಂಡಿವೆ.
ಕರ್ನಾಟಕ ಕರಕುಶಲ ಕಲೆಯ ಅನಾವರಣ ಕರ್ನಾಟಕ ರಾಜ್ಯ ಆರ್ಟ್ಸ್ ಅಂಡ್ ಕ್ರಾಪ್ಟ್ಸ್ ಎಂಪೋರಿಯಂ ವತಿಯಿಂದ ಏಕತಾ ಮಾಲ್ನಲ್ಲಿ ಕಾವೇರಿ ಕರಕುಶಲ ವಸ್ತುಗಳ ಮಳಿಗೆ ಕೂಡ ತಲೆ ಎತ್ತಿ ನಿಂತಿದೆ. ರಾಜ್ಯದಲ್ಲಿ ಹೆಚ್ಚು ಪ್ರಖ್ಯಾತಿ ಗಳಿಸಿ ಅನೇಕ ಜನರನ್ನ ಆಕರ್ಷಿಸಿದ್ದ ಕರಕುಶಲ ವಸ್ತುಗಳು ಇದೀಗ ಗುಜರಾತ್ನಲ್ಲೂ ಲಭ್ಯವಾಗಲಿವೆ.
ಈ ಮಳಿಗೆಯಲ್ಲಿ ವಿವಿಧ ಬಗೆಯ ಗಂಧದ ಮರದಿಂದ ತಯಾರಿಸಿದ ಫ್ರೇಮ್, ಟ್ರೇ, ದೇವತೆ, ಪ್ರಾಣಿ ಪಕ್ಷಿಗಳ ಮೂರ್ತಿಗಳು, ಆಭರಣ ಪೆಟ್ಟಿಗೆಗಳು, ಜೋಕಾಲಿ, ವಿವಿಧ ಬಗೆಯ ಹಾರಗಳು, ಪೂಜಾ ಸಾಮಗ್ರಿಗಳು, ಪೀಠೋಪಕರಣಗಳು, ಕಲಾಕೃತಿಗಳು ಮಾರಾಟಕ್ಕಿವೆ. ಅಲ್ಲದೆ ಅಗರಬತ್ತಿ, ಮನೆಯ ಸೌಂದರ್ಯ ಹೆಚ್ಚಿಸುವ ಹಾಗೂ ಗೃಹೋಪಯೋಗಿ ಅನೇಕ ವಸ್ತುಗಳು ಸೇರಿದಂತೆ ಮೂರು ಸಾವಿರಕ್ಕೂ ಅಧಿಕ ವಸ್ತುಗಳು ಇಲ್ಲಿ ದೊರಕಲಿವೆ.