ಕರ್ನಾಟಕ

karnataka

ETV Bharat / bharat

ಕೊಳವೆ ಬಾವಿಗೆ ಬಿದ್ದ ಬಾಲಕಿ: ಭರದಿಂದ ಸಾಗಿದ ರಕ್ಷಣಾ ಕಾರ್ಯ - ಹರಿಯಾಣದಲ್ಲಿ ಬೋರ್‌ವೆಲ್​ಗೆ ಬಿದ್ದ ಬಾಲಕಿ

ಹರ್ಸಿಂಗ್‌ಪುರದ ಗರೌಂಡಾ ಎಂಬ ಗ್ರಾಮದಲ್ಲಿ 5 ವರ್ಷದ ಮಗು ಕೊಳವೆ ಬಾವಿಗೆ ಬಿದ್ದಿದೆ. ಮಗುವನ್ನು ರಕ್ಷಿಸಿಲು ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

50 ಅಡಿ ಆಳದ ಬೋರ್‌ವೆಲ್​ಗೆ ಬಿದ್ದ ಬಾಲಕಿ

By

Published : Nov 4, 2019, 9:35 AM IST

Updated : Nov 4, 2019, 9:43 AM IST

ಹರಿಯಾಣ: ಹರ್ಸಿಂಗ್‌ಪುರದ ಗರೌಂಡಾ ಗ್ರಾಮದಲ್ಲಿ 5 ವರ್ಷದ ಮಗು ಕೊಳವೆ ಬಾವಿಗೆ ಬಿದ್ದಿದೆ. ಮಗುವನ್ನು ರಕ್ಷಿಸಿಲು ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

ಕೊಳವೆ ಬಾವಿಗೆ ಬಿದ್ದ ಬಾಲಕಿ

ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ 5 ವರ್ಷದ ಶಿವಾನಿ ಎಂಬ ಬಾಲಕಿ ಆಟ ಆಡುತ್ತಿದ್ದಾಗ ಹೊಲದಲ್ಲಿನ ಕೊಳವೆ ಬಾವಿಗೆ ಬಿದ್ದಿದ್ದಾಳೆ. ಮಗಳು ಕಾಣೆಯಾದ ಆತಂಕದಲ್ಲಿ ಮನೆಯವರು ಶಿವಾನಿಗಾಗಿ ಹುಡುಕಾಟ ನಡೆಸಿದ್ದಾರೆ. ಸುಮಾರು 5 ಗಂಟೆಗಳ ಬಳಿಕ ಮಗಳು ಬೋರ್​ವೆಲ್​ನಲ್ಲಿ ಬಿದ್ದಿರುವುದು ತಿಳಿದಿದೆ. ಬೋರ್​ವೆಲ್​ನಲ್ಲಿ ಮೊಬೈಲ್​ ಇಳಿಬಿಟ್ಟು ನೋಡಿದಾಗ ಬಾಲಕಿ ಬೋರ್​ವೆಲ್​ನಲ್ಲಿ ಬಿದ್ದಿರುವುದು ಖಚಿತಗೊಂಡಿದೆ.

ಸುಮಾರು 50 ಅಡಿ ಆಳದಲ್ಲಿ ಶಿವಾನಿ ಸಿಲುಕಿರಬಹುದೆಂದು ಅಂದಾಜಿಸಲಾಗಿದ್ದು, ಪೊಲೀಸರು ಮತ್ತು ಎನ್‌ಡಿಆರ್‌ಎಫ್ ತಂಡ ರಕ್ಷಣಾ ಕಾರ್ಯ ಆರಂಭಿಸಿದ್ದಾರೆ. ಬೋರ್​ವೆಲ್​ನಿಂದ ಸ್ವಲ್ಪ ದೂರದಲ್ಲಿ ಜೆಸಿಬಿಯಿಂದ ಭೂಮಿ ಅಗೆಯಲಾಗುತ್ತಿದೆ.

Last Updated : Nov 4, 2019, 9:43 AM IST

ABOUT THE AUTHOR

...view details