ಮಲಪ್ಪುರಂ: ದುಬೈನಿಂದ 174 ಮಂದಿ ಪ್ರಯಾಣಿಕರನ್ನು ಹೊತ್ತು ಬಂದಿದ್ದ ಇಂಡಿಯನ್ ಏರ್ಲೈನ್ ಕೇರಳದ ಕೋಯಿಕ್ಕೋಡ್ನ ಕರಿಪುರ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವಾಗ ರನ್ವೇಯಿಂದ ಜಾರಿ ಅವಘಡಕ್ಕೀಡಾಗಿತ್ತು. ಇನ್ನು ಈ ಘಟನೆಯಲ್ಲಿ ಗಾಯಗೊಂಡಿದ್ದ ಮತ್ತೋರ್ವ ವ್ಯಕ್ತಿ ಇಂದು ಸಾವನ್ನಪ್ಪಿದ್ದಾರೆ.
ಕರಿಪುರ ವಿಮಾನ ಅವಘಡ: ಸಾವಿನ ಸಂಖ್ಯೆ 21ಕ್ಕೆ ಏರಿಕೆ - Malappuram
ಕೇರಳದಲ್ಲಿ ಸಂಭವಿಸಿದ ಇಂಡಿಯನ್ ಏರ್ಲೈನ್ ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.
ಕರಿಪುರ ವಿಮಾನ ಅವಘಡ
ಕೋಯಿಕ್ಕೋಡ್ ಮೂಲದ ಮಂಜುಳ ಕುಮಾರಿ (38) ಮೃತ ಮಹಿಳೆ. ಸದ್ಯ ವಿಮಾನ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 21ಕ್ಕೆ ಏರಿದೆ.
ಮಂಜುಳ ಕುಮಾರಿ ಕೋಯಿಕ್ಕೋಡ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪತಿಯೊಂದಿಗೆ ದುಬೈನ ರಾಸ್ ಅಲ್ ಖೈಮಾದಲ್ಲಿದ್ದ ಮಂಜುಳಾ ತನ್ನ ಸ್ನೇಹಿತ ರಮ್ಯಾ ಮುರಳೀಧರನ್ ಅವರೊಂದಿಗೆ ಕೇರಳಕ್ಕೆ ಮರಳುತ್ತಿದ್ದರು. ಆಗಸ್ಟ್ 7ರ ರಾತ್ರಿ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು ಮಲಪ್ಪುರಂ ಜಿಲ್ಲೆಯ ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ವೇಳೆ ರನೇವೇಯಿಂದ ಜಾರಿ ಅವಘಡ ಸಂಭವಿಸಿತ್ತು.