ಮುಂಬೈ:ಕರಾಚಿ ಒಂದು ದಿನ ಭಾರತದ ಭಾಗವಾಗಲಿದೆ. ನಾವು 'ಅಖಂಡ ಭಾರತ'ದ ವಿಶ್ವಾಸದಲ್ಲಿದ್ದೇವೆ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಮುಂಬೈನಲ್ಲಿ ನಡೆದ ಕರಾಚಿ ಪದ ಬಳಕೆಯ ಘಟನೆ ಬಗ್ಗೆ ಅವರು ಈ ಹೇಳಿಕೆಯನ್ನು ನೀಡಿದ್ದಾರೆ. ಶಿವಸೇನೆ ಕಾರ್ಯಕರ್ತನೊಬ್ಬ 'ಕರಾಚಿ ಸ್ವೀಟ್ಸ್' ಹೆಸರಿನ ಅಂಗಡಿಯ ಮಾಲೀಕನಿಗೆ ಬೆದರಿಸಿ ಕರಾಚಿ ಹೆಸರು ಪಾಕಿಸ್ತಾನದ್ದಾಗಿದೆ.
ಬಾಂದ್ರಾದಲ್ಲಿರುವ ಅಂಗಡಿಗೆ ಇಲ್ಲಿನದೇ ಭಾರತೀಯ ಅಥವಾ ಮರಾಠಿಯ ಯಾವುದಾದರೂ ಹೆಸರನ್ನು ಇಟ್ಟುಕೊಳ್ಳಬೇಕೆಂದು ಬೆದರಿಕೆ ಹಾಕಿದ್ದ.
ಇನ್ನು ಪಕ್ಷದ ಕಾರ್ಯಕರ್ತನ ಈ ವರ್ತನೆಯನ್ನ ಶಿವಸೇನೆ ಅಲ್ಲಗಳೆದು, ಕರಾಚಿ ಬೇಕರಿ ಬಗ್ಗೆ ಧನಾತ್ಮಕ ಮಾತನಾಡಿದೆ. ಕರಾಚಿ ಬೇಕರಿ ಹಾಗೂ ಅದರ ಮಾಲೀಕರು ಕಳೆದ 60 ವರ್ಷಗಳಿಂದ ಮುಂಬೈನಲ್ಲಿ ನೆಲೆಸಿದ್ದು, ಅವರಿಗೂ ಪಾಕ್ನ ಕರಾಚಿಗೂ ಯಾವುದೇ ಸಂಬಂಧವಿಲ್ಲ ಎಂದು ಶಿವಸೇನೆ ವಕ್ತಾರ ಸಂಜಯ್ ರಾವತ್ ಹೇಳಿದ್ದಾರೆ.