ಪುನಾ: ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ಜತೆಗೆ ಟೀಂ ಇಂಡಿಯಾ ಆಡಬೇಕೋ ಬೇಡವೋ ಅನ್ನೋದನ್ನ ಕೇಂದ್ರ ಸರ್ಕಾರದಲ್ಲಿರುವ ಸಂಬಂಧಿತ ವ್ಯಕ್ತಿಗಳೇ ನಿರ್ಧರಿಸಬೇಕು. ಅದನ್ನ ಬಿಟ್ಟು ನಮ್ಮ ನಿಮ್ಮಂತ ಸಾಮಾನ್ಯ ಜನ ಆ ಬಗ್ಗೆ ನಿರ್ಧಾರ ಕೈಗೊಳ್ಳೋದಕ್ಕೆ ಆಗೋದಿಲ್ಲ ಅಂತ ಮಾಜಿ ಕ್ರಿಕೆಟರ್ ಕಪಿಲ್ ದೇವ್ ಸ್ಪಷ್ಟಪಡಿಸಿದ್ದಾರೆ.
ನಾವು ನಿರ್ಧರಿಸೋಕಾಗಲ್ಲ, ಕೇಂದ್ರವೇ ನಿರ್ಧರಿಸಲಿ: ವರ್ಲ್ಡ್‌ಕಪ್ ಹೀರೋ ಕಪಿಲ್ ದೇವ್! - kannada news
ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ಜತೆಗೆ ಟೀಂ ಇಂಡಿಯಾ ಆಡಬೇಕೋ ಬೇಡವೋ ಅನ್ನೋ ಬಗ್ಗೆ ಮಾಜಿ ಕ್ರಿಕೆಟರ್ ಕಪಿಲ್ ದೇವ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪುನಾದಲ್ಲಿ ಹೇಳಿಕೆ ನೀಡಿರುವ ಅವರು, ದೇಶದ ಕಾಳಜಿಯನ್ನ ಇರಿಸಿಕೊಂಡು ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡರೂ ನಾವು ಅದನ್ನ ಗೌರವಿಸಬೇಕು ಮತ್ತು ಅದರಂತೆಯೇ ನಡೆದುಕೊಳ್ಳಬೇಕು. ಮುಂಬರುವ ವಿಶ್ವಕಪ್‌ನಲ್ಲಿ ಪಾಕ್‌ನ ಜತೆಗೆ ಭಾರತ ಆಡಬೇಕೋ ಬೇಡ್ವೋ ಅನ್ನೋದನ್ನ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳೋದಕ್ಕೆ ಬಿಟ್ಟುಬಿಡಬೇಕು. ನಮ್ಮಂತವರು ಆ ಬಗ್ಗೆ ಯಾವುದೇ ಅಭಿಪ್ರಾಯ ನೀಡದಿರೋದೇ ಒಳ್ಳೇಯದು. ಆ ಸಂಬಂಧ ಕೇಂದ್ರವೇ ಸ್ಪಷ್ಟ ನಿರ್ಧಾರಕ್ಕೆ ಬರಲಿ ಅಂತ ಕಪಿಲ್ ಹೇಳಿದ್ದಾರೆ.
ಪುಲ್ವಾಮಾದಲ್ಲಿ ಉಗ್ರರ ಹೀನ ಕೃತ್ಯ ನಡೆಸಿದ ಪಾಕ್ ಜತೆಗೆ ಟೀಂ ಇಂಡಿಯಾ ವಿಶ್ವಕಪ್‌ನಲ್ಲಿ ಆಡದಿರುವ ಕಠಿಣ ನಿರ್ಧಾರ ಕೈಗೊಳ್ಳಬೇಕೆಂಬ ಒತ್ತಡ ಸಾಕಷ್ಟು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ, 1983ರ ವಿಶ್ವಕಪ್ ಗೆದ್ದ ತಂಡದ ನಾಯಕತ್ವವಹಿಸಿದ್ದ ಕಪಿಲ್ ದೇವ್ ಈ ರೀತಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.