ಕಾನ್ಪುರ್:ಶಾಲೆಯಲ್ಲಿ ತಾನು ಹೇಳಿರುವ ಮಾತು ಕೇಳಲಿಲ್ಲ ಎಂದು ಕುಪಿತಗೊಂಡ ಶಿಕ್ಷಕ ವಿದ್ಯಾರ್ಥಿನಿಗೆ ಗುಂಡಿಕ್ಕಿ ಕೊಲೆಗೈದ ಅಮಾನವೀಯ ಘಟನೆ ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಸಾವನ್ನಪ್ಪಿದ್ದು, ಕಾನ್ಪುರದ ಡೆಹತ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಕಳೆದ ಕೆಲ ದಿನಗಳಿಂದ ನಿರಂತರವಾಗಿ ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿದ್ದ ಶಿಕ್ಷಕ ಶೈಲೇಂದ್ರ ರಜಪೂತ್ ನಿನ್ನೆ ಈ ಕೃತ್ಯವೆಸಗಿದ್ದಾನೆ. ಈ ಹಿಂದೆ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದಕ್ಕಾಗಿ 3 ತಿಂಗಳ ಕಾಲ ಶಾಲೆಯಿಂದ ಅಮಾನತು ಶಿಕ್ಷೆ ಅನುಭವಿಸಿದ್ದ ಆರೋಪಿ ಮತ್ತೆ ಶಾಲೆಗೆ ವಾಪಸ್ ಆಗಿದ್ದ. ಇದೀಗ ಅದೇ ಕೋಪದಲ್ಲಿ ಈ ಕುಕೃತ್ಯವೆಸಗಿದ್ದಾನೆಂದು ತಿಳಿದು ಬಂದಿದೆ.