ಕಾನ್ಪುರ(ಉತ್ತರ ಪ್ರದೇಶ):ಕಾನ್ಪುರದ ವಿಜಯ್ ನಗರ ಬಳಿಯ ಕಸದ ತೊಟ್ಟಿಯಲ್ಲಿ 500 ಮತ್ತು 2,000 ರೂಪಾಯಿ ನೋಟುಗಳು ಪತ್ತೆಯಗಿದ್ದು, ಘಟನೆ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕಸದ ತೊಟ್ಟಿಯಲ್ಲಿ 500-2000 ರೂ. ನೋಟುಗಳು ಪತ್ತೆ: ಪೊಲೀಸರು ಹೋಗುವಷ್ಟರಲ್ಲಿ ದುಡ್ಡೇ ಮಾಯ! - ಹಸದ ತೊಟ್ಟಿಯಲ್ಲಿ ಹಣ ಪತ್ತೆ
ಉತ್ತರ ಪ್ರದೇಶದ ಕಾನ್ಪುರದ ವಿಜಯ್ ನಗರದಲ್ಲಿ ಕಸದ ತೊಟ್ಟಯೊಂದರಲ್ಲಿ ಐದು ನೂರು ಮತ್ತು ಎರಡು ಸಾವಿರ ರೂಪಾಯಿ ನೋಟುಗಳು ಪತ್ತೆಯಾಗಿವೆ.
![ಕಸದ ತೊಟ್ಟಿಯಲ್ಲಿ 500-2000 ರೂ. ನೋಟುಗಳು ಪತ್ತೆ: ಪೊಲೀಸರು ಹೋಗುವಷ್ಟರಲ್ಲಿ ದುಡ್ಡೇ ಮಾಯ! Rs 500 and Rs 2,000 Rupee notes found in garbage dump](https://etvbharatimages.akamaized.net/etvbharat/prod-images/768-512-9227057-188-9227057-1603072018496.jpg)
ಕಸದ ತೊಟ್ಟಿಯಲ್ಲಿ 500-2000 ರೂ.ನೋಟುಗಳು ಪತ್ತೆ
ಭಾನುವಾರ ಮುಂಜಾನೆ 5 ಗಂಟೆ ಸುಮಾರಿಗೆ ಕಸ ಆರಿಸುವ ವ್ಯಕ್ತಿಗೆ ನೋಟುಗಳು ಕಂಡುಬಂದಿದ್ದು, ಸ್ಥಳೀಯ ಜನರಿಗೆ ಈ ವಿಷಯ ತಪಿದೆ. ಕಸ ಆಯುವವರು ಮತ್ತು ಸ್ಥಳೀಯರು ನೋಟುಗಳನ್ನು ತೆಗೆದುಕೊಂಡು ಹೋಗಿದ್ದಾರೆಂದು ವರದಿಯಾಗಿದೆ. ಆ ಪೈಕಿ ಒಬ್ಬ ವ್ಯಕ್ತಿ 10,000 ರೂಪಾಯಿ ತೆಗೆದುಕೊಂಡು ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ವಿಷಯ ತಿಳಿದ ಪೊಲೀಸರು, ಸ್ಥಳಕ್ಕೆ ತೆರಳುವಷ್ಟರಲ್ಲಿ ಯಾವುದೇ ನೋಟುಗಳು ಕಂಡುಬಂದಿಲ್ಲ. ಘಟನೆ ಕುರಿತಂತೆ ತನಿಖೆ ಆರಂಭಿಸಿದ್ದಾರೆ.