ಕರ್ನಾಟಕ

karnataka

ETV Bharat / bharat

ಎನ್​ಕೌಂಟರ್​ ಪ್ರಕರಣ : ಆರೋಪಿ ವಿಕಾಸ್ ದುಬೆಯ ಆಕ್ರಮ ಆಸ್ತಿ, ಹಣ ಜಪ್ತಿಗೆ ಮುಂದಾದ ಪೊಲೀಸರು - ಕಾನ್ಪುರ ಪೊಲೀಸರ ಹತ್ಯೆ

ಕಾನ್ಪುರದಲ್ಲಿ 8 ಪೊಲೀಸರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಿಕಾಸ್​ ದುಬೆಯ ಅಕ್ರಮ ಆಸ್ತಿ ಮತ್ತು ಬ್ಯಾಂಕ್ ಖಾತೆಯ ಹಣವನ್ನು ವಶಪಡಿಸಿಕೊಳ್ಳಲಾಗುತ್ತದೆ ಎಂದು ಐಜಿ ಮಾಹಿತಿ ನೀಡಿದ್ದಾರೆ.

Kanpur encounter case
ಕಾನ್ಪುರ ಪೊಲೀಸರ ಎನ್​ಕೌಂಟರ್

By

Published : Jul 5, 2020, 9:38 AM IST

ಕಾನ್ಪುರ (ಉತ್ತರ ಪ್ರದೇಶ) :ಪೊಲೀಸರ ಹತ್ಯೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಬೇಕಾಗಿರುವ ಮೋಸ್ಟ್​ ವಾಟೆಂಡ್​ ರೌಡಿಶೀಟರ್​ ವಿಕಾಸ್ ದುಬೆಯ ಅಕ್ರಮ ಆಸ್ತಿ, ಬ್ಯಾಂಕ್ ಖಾತೆಗಳಲ್ಲಿದ್ದ ಹಣವನ್ನು ದರೋಡೆ ಕಾಯ್ದೆಯಡಿ ವಶಪಡಿಸಿಕೊಳ್ಳಲಾಗುವುದು ಎಂದು ಕಾನ್ಪುರ ಐಜಿ ಮೋಹಿತ್ ಅಗರ್ವಾಲ್ ತಿಳಿಸಿದ್ದಾರೆ.

ಕಾನ್ಪುರದಲ್ಲಿ ನಡೆದ ಪೊಲೀಸರ ಮೇಲಿನ ದಾಳಿ ಪ್ರಕರಣದಲ್ಲಿ ದುಬೆ ಮುಖ್ಯ ಆರೋಪಿಯಾಗಿದ್ದಾನೆ. ಕಳೆದ ಗುರುವಾರ ತಡರಾತ್ರಿ ಆರೋಪಿಯೊಬ್ಬನನ್ನು ಬಂಧಿಸಲು ಹೋದ ಪೊಲೀಸ್ ತಂಡದ ಮೇಲೆ ದುಬೆ ಮತ್ತು ಆತನ ತಂಡ ದಾಳಿ ನಡೆಸಿ 8 ಮಂದಿ ಪೊಲೀಸರನ್ನು ಹತ್ಯೆ ಮಾಡಿದ್ದರು. ಘಟನೆಯಲ್ಲಿ ಇಬ್ಬರು ಆರೋಪಿಗಳನ್ನು ಎನ್​ಕೌಂಟರ್​ ಮಾಡಲಾಗಿದ್ದು, 22 ಜನರನ್ನು ಬಂಧಿಸಲಾಗಿದೆ. ಇನ್ನು ಪ್ರಕರಣಕ್ಕೆ ಸಂಬಂಧಪಟ್ಟಂತೆ ಚೌಬೆಪುರ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್​ನ್ನು ಅಮಾನತಗೊಳಿಸಲಾಗಿದೆ ಎಂದು ಐಜಿ ಮೋಹಿತ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.

ಕಾನ್ಪುರ ಐಜಿ ಮೋಹಿತ್ ಅಗರ್ವಾಲ್

ಆರೋಪಿ ವಿಕಾಸ್​ ದುಬೆ ಹಳ್ಳಿಯಲ್ಲಿ ಆಕ್ರಮಿಸಿಕೊಂಡಿದ್ದ ಜಮೀನಿನಲ್ಲಿ ಮನೆ ಕಟ್ಟಿ ಅಲ್ಲಿಂದಲೇ ಅಪರಾಧ ಚುಟವಟಿಕೆಗಳನ್ನು ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಹತ್ಯೆ ಬಳಿಕ ಆರೋಪಿ ದುಬೆ ತಲೆಮರೆಸಿಕೊಂಡಿದ್ದ, ಹೀಗಾಗಿ ಆತನ ಸುಳಿವು ನೀಡಿದವರಿಗೆ 50 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು ಎಂದು ಐಜಿ ಘೋಷಿಸಿದ್ದರು. ಈ ಮಧ್ಯೆ, ಜಿಲ್ಲಾಡಳಿತ ದುಬೆ ವಾಸವಿದ್ದ ಮನೆಯನ್ನು ನೆಲಸಮಗೊಳಿಸಿದ್ದು, ಆತನ ವಾಹನಗಳನ್ನು ಜಖಂಗೊಳಿಸಿದೆ.

ಬಿಕಾರು ಗ್ರಾಮದ ಎನ್​ಕೌಂಟರ್​ನಲ್ಲಿ ಪ್ರಾಣ ಕಳೆದುಕೊಂಡ ಪೊಲೀಸರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪುಷ್ಪ ನಮನ ಸಲ್ಲಿಸಿದರು ಮತ್ತು ಮೃತ ಪೊಲೀಸರ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ಘೋಷಿಸಿದ್ದಾರೆ.

ABOUT THE AUTHOR

...view details