ಕರ್ನಾಟಕ

karnataka

ETV Bharat / bharat

ಯುಪಿಯಲ್ಲಿ 8 ಪೊಲೀಸರು ಹುತಾತ್ಮ... 1 ಕೋಟಿ ರೂ. ಪರಿಹಾರ, ಸರ್ಕಾರಿ ಕೆಲಸ ಘೋಷಿಸಿದ ಯೋಗಿ! - 8 ಪೊಲೀಸರು ಹುತಾತ್ಮ

ಉತ್ತರ ಪ್ರದೇಶದಲ್ಲಿ ಗೂಂಡಾಗಳ ಅಟ್ಟಹಾಸಕ್ಕೆ 8 ಮಂದಿ ಪೊಲೀಸರು ಹುತಾತ್ಮರಾಗಿದ್ದು, ಈ ವಿಚಾರವಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​ ಸುದ್ದಿಗೋಷ್ಠಿ ನಡೆಸಿದರು.

cm yogi
cm yogi

By

Published : Jul 3, 2020, 6:34 PM IST

ಕಾನ್ಫುರ್​​​ (ಯುಪಿ): ಉತ್ತರಪ್ರದೇಶದ ಕಾನ್ಪುರದಲ್ಲಿ ದುಷ್ಕರ್ಮಿಗಳ ಗುಂಡಿನ ದಾಳಿಯಿಂದ 8 ಪೊಲೀಸರು ಹುತಾತ್ಮರಾಗಿರುವ ಘಟನೆ ನಡೆದಿದ್ದು, ಇದೀಗ ಅವರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಗೌರವಾರ್ಥ ಪರಿಹಾರ ಘೋಷಣೆ ಮಾಡಿದ್ದಾರೆ.

ರೌಡಿಶೀಟರ್​ವೋರ್ವನ ಬಂಧನ ಮಾಡಲು ತೆರಳಿದ್ದ ವೇಳೆ ಉಪ ಪೊಲೀಸ್ ವರಿಷ್ಠಾಧಿಕಾರಿ, ಮೂವರು ಸಬ್​​ ಇನ್ಸ್​ಪೆಕ್ಟರ್​ಗಳು ಸೇರಿದಂತೆ ಎಂಟು ಮಂದಿ ಪೊಲೀಸರು ಕ್ರಿಮಿನಲ್​ಗಳ ಗುಂಡಿಗೆ ಬಲಿಯಾಗಿದ್ದರು. ಜತೆಗೆ ಏಳು ಮಂದಿ ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದಾರೆ.

ಯೋಗಿ ಆದಿತ್ಯನಾಥ್​ ಸುದ್ದಿಗೋಷ್ಠಿ

ಹುತಾತ್ಮ ಯೋಧರ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಯೋಗಿ ಆದಿತ್ಯನಾಥ್​​ ಗೌರವ ಸಲ್ಲಿಕೆ ಮಾಡಿದರು. ಇದಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪೊಲೀಸರ ತ್ಯಾಗ ಯಾವುದೇ ಕಾರಣಕ್ಕೂ ವ್ಯರ್ಥವಾಗಲು ಬಿಡುವುದಿಲ್ಲ. ಜನರೇ ಇದಕ್ಕೆ ಕಾರಣ ಎಂದಿರುವ ಅವರು, ಸರ್ಕಾರ ಪ್ರತಿ ಕುಟುಂಬಕ್ಕೂ 1 ಕೋಟಿ ರೂ. ಪರಿಹಾರ, ಪಿಂಚಣಿ ಹಾಗೂ ಒಬ್ಬರಿಗೆ ಸರ್ಕಾರ ಕೆಲಸ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಹುತಾತ್ಮ ಪೊಲೀಸರಿಗೆ ಯೋಗಿ ನಮನ

ಎನ್​ಕೌಂಟರ್​​ನಲ್ಲಿ ಪೊಲೀಸ್​ ವರಿಷ್ಠಾಧಿಕಾರಿ ದೇವೇಂದ್ರ ಕುಮಾರ್ ಮಿಶ್ರಾ, ಸಬ್​ ಇನ್ಸ್​ಪೆಕ್ಟರ್​​ ಮಹೇಶ್ ಯಾದವ್, ಅನೂಪ್ ಕುಮಾರ್​ಮತ್ತು ನೆಬುಲಾಲ್ ಹಾಗೂ ಪೇದೆಗಳಾದ ಸುಲ್ತಾನ್ ಸಿಂಗ್, ರಾಹುಲ್ ಜಿತೇಂದ್ರ, ಮತ್ತು ಬಬ್ಲು ಹುತಾತ್ಮರಾಗಿದ್ದಾರೆ ಎಂದು ಅವರು ತಿಳಿಸಿದರು.

ABOUT THE AUTHOR

...view details