ಕಾನ್ಪುರ (ಉತ್ತರ ಪ್ರದೇಶ): ರೌಡಿಶೀಟರ್ ವಿಕಾಸ ದುಬೆ ಸೇರಿದಂತೆ 35 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಕಾನ್ಪುರದಲ್ಲಿ ಪೊಲೀಸರ ಹತ್ಯೆ: ರೌಡಿಶೀಟರ್ ವಿಕಾಸ್ ದುಬೆ ಸೇರಿ 35 ಜನರ ವಿರುದ್ಧ ಪ್ರಕರಣ - ರೌಡಿಶೀಟರ್ ವಿಕಾಸ ದುಬೆ
ಉತ್ತರ ಪ್ರದೇಶದ ಕಾನ್ಪುರದಲ್ಲಿ ರೌಡಿಶೀಟರ್ ವಿಕಾಸ ದುಬೆ ಬಂಧನಕ್ಕೆ ತೆರಳಿದ್ದ ವೇಳೆ ದುಷ್ಕರ್ಮಿಗಳು ಪೊಲೀಸರ ಮೇಲೆ ಗುಂಡಿನ ಮಳೆಗರೆದು 8 ಸಿಬ್ಬಂದಿಯನ್ನು ಹತ್ಯೆಗೈದಿದ್ದರು. ಈ ಸಂಬಂಧ ಪ್ರಕರಣದ ಪ್ರಮುಖ ಆರೋಪಿ ವಿಕಾಸ್ ದುಬೆ ಸೇರಿ 35 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.

FIR against 35 including Vikas dubey for killing 8 cops
ಉತ್ತರ ಪ್ರದೇಶದ ಕಾನ್ಪುರದಲ್ಲಿ ರೌಡಿಶೀಟರ್ ವಿಕಾಸ ದುಬೆ ಬಂಧನಕ್ಕೆ ತೆರಳಿದ್ದ ವೇಳೆ ದುಷ್ಕರ್ಮಿಗಳು ಪೊಲೀಸರ ಮೇಲೆ ದಾಳಿ ನಡೆಸಿ 8 ಸಿಬ್ಬಂದಿಯನ್ನು ಹತ್ಯೆಗೈದಿದ್ದರು. ಈ ಸಂಬಂಧ ವಿಕಾಸ ದುಬೆ ಸೇರಿ 35 ಜನರ ವಿರುದ್ಧ ಎಫ್ಐಆರ್ ದಾಖಲಾಗಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾನ್ಪುರದಲ್ಲಿ ಎನ್ಕೌಂಟರ್ ಬಳಿಕ ನಡೆದ ಕೂಂಬಿಂಗ್ ಕಾರ್ಯಾಚರಣೆ ವೇಳೆ ಇಬ್ಬರು ದುಷ್ಕರ್ಮಿಗಳನ್ನು ಪೊಲೀಸರು ಹೊಡೆದುರುಳಿಸಿದ್ದಾರೆ. ರೌಡಿ ವಿಕಾಸ್ ದುಬೆ ಇರುವ ಸ್ಥಳದ ಬಗ್ಗೆ ಮಾಹಿತಿ ನೀಡುವ ವ್ಯಕ್ತಿಗೆ 50,000 ರೂ ನಗದು ನೀಡಲಾಗುವುದು ಎಂದು ಐಜಿ ಮೋಹಿತ್ ಅಗರವಾಲ್ ಘೋಷಿಸಿದ್ದಾರೆ.