ಕರ್ನಾಟಕ

karnataka

ETV Bharat / bharat

ರೌಡಿಗಳ ಗುಂಡಿನ ದಾಳಿ - 8 ಪೊಲೀಸ್ ಸಿಬ್ಬಂದಿ ಹುತಾತ್ಮ:ಕಠಿಣ ಕ್ರಮಕ್ಕೆ ಯೋಗಿ ನಿರ್ದೇಶನ - Kanpur: 8 police personnel killed in a row to nab history-sheeter

ಉತ್ತರ ಪ್ರದೇಶದ ಕಾನ್ಪುರದಲ್ಲಿ ದುಷ್ಕರ್ಮಿಗಳು ಮತ್ತು ಪೊಲೀಸ್ ಸಿಬ್ಬಂದಿ ನಡುವೆ ನಡೆದ ಎನ್​ಕೌಂಟರ್​ನಲ್ಲಿ 8 ಜನ ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ರೌಡಿ ಶೀಟರ್​​​ ಗಾಗಿ ಉತ್ತರಪ್ರದೇಶ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಆಗಮಿಸಿ ಪರಿಶೀಲನೆ ಕೈಗೊಂಡಿದ್ದಾರೆ.

Kanpur: 8 police personnel killed in a row to nab history-sheeter
ದುಷ್ಕರ್ಮಿಗಳಿಂದ ಗುಂಡಿನ ದಾಳಿ: 8 ಜನ ಪೊಲೀಸ್ ಸಿಬ್ಬಂದಿ ಹುತಾತ್ಮ

By

Published : Jul 3, 2020, 6:42 AM IST

Updated : Jul 3, 2020, 9:04 AM IST

ಕಾನ್ಪುರ (ಉತ್ತರ ಪ್ರದೇಶ):ಉತ್ತರ ಪ್ರದೇಶದ ವಾರಾಣಾಸಿಯಲ್ಲಿ ದುಷ್ಕರ್ಮಿಗಳು ಮತ್ತು ಪೊಲೀಸ್ ಸಿಬ್ಬಂದಿ ನಡುವೆ ನಡೆದ ಎನ್​ಕೌಂಟರ್​ನಲ್ಲಿ 8 ಮಂದಿ ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿದ್ದರೆ, ಎಸ್‌ಒ ಸೇರಿದಂತೆ ಐವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.

ಎನ್​ಕೌಂಟರ್​ನಲ್ಲಿ ಸಿಒ ಬಿಲ್ಹೋರ್ ದೇವೇಂದ್ರ ಮಿಶ್ರಾ, ಎಸ್‌ಒ ಶಿವರಾಜ್‌ಪುರ ಮಹೇಶ್ ಯಾದವ್, ಸಬ್ ಇನ್ಸ್‌ಪೆಕ್ಟರ್ ಮತ್ತು ಐವರು ಸಿಬ್ಬಂದಿ ಕೂಡ ಸಾವನ್ನಪ್ಪಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ರೀಜೆನ್ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚೌಬೆಪುರ ಪೊಲೀಸ್ ಠಾಣೆ ವ್ಯಾಪ್ತಿಯ ವಿಕ್ರು ಗ್ರಾಮಕ್ಕೆ ರೌಡಿ ಶೀಟರ್​ ವಿಕಾಸ್​ ದುಬೆನನ್ನು ಬಂಧಿಸಲು ತೆರಳಿದ್ದಾಗ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ 8 ಮಂದಿ ಪೊಲೀಸರು ಮೃತಪಟ್ಟಿದ್ದಾರೆ. ವಿಕಾಸ್​​ ದುಬೆ ಮೇಲೆ ಸುಮಾರು 60 ಪ್ರಕರಣಗಳು ದಾಖಲಾಗಿವೆ.

ರೌಡಿಗಳ ಗುಂಡಿನ ದಾಳಿ: 8 ಪೊಲೀಸ್ ಸಿಬ್ಬಂದಿ ಹುತಾತ್ಮ

ಘಟನೆ ನಡೆಯುತ್ತಿದ್ದಂತೆ ಕಾನ್ಪುರ ವಲಯ ಎಎಸ್​​​​ಪಿ, ಎಡಿಜಿಪಿ ಹಾಗೂ ಐಜಿ ಸ್ಥಳಕ್ಕೆ ಧಾವಿಸಿದ್ದು, ವಿಕಾಸ್​ ದುಬೆ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಘಟನಾ ಸ್ಥಳಕ್ಕೆ ಫೊರೆನ್ಸಿಕ್​​ ತಂಡ ಆಗಮಿಸಿದೆ.

ಸಿಎಂ ಸಂತಾಪ: ಕಠಿಣ ಕ್ರಮಕ್ಕೆ ನಿರ್ದೇಶನ:

ಈ ಘಟನೆ ಸಂಬಂಧ ಸಿಎಂ ಯೋಗಿ ಆದಿತ್ಯನಾಥ ಸಂತಾಪ ಸೂಚಿಸಿದ್ದಾರೆ. ಇದೇ ವೇಳೆ ಕ್ರಿಮಿನಲ್​​ಗಳನ್ನ ತಕ್ಷಣ ಬಂಧಿಸುವಂತೆ ಹಾಗೂ ಕಠಿಣ ಕ್ರಮ ಕೈಗೊಳ್ಳುವಂತೆ ಡಿಜಿಪಿ ಹೆಚ್​.ಸಿ. ಅವಾಸ್ತಿಗೆ ಸಿಎಂ ನಿರ್ದೇಶನ ನೀಡಿದ್ದಾರೆ.

ರೌಡಿಗಳಿಗಾಗಿ ಶೋಧ ತೀವ್ರಗೊಳಿಸಿದ ಪೊಲೀಸರು:

ಕಾನ್ಪುರ್​ ವಿಭಾಗದ ಹೆಚ್ಚುವರಿ ಪೊಲೀಸ್​ ಮಹಾ ನಿರ್ದೇಶಕ ಜೆ ಎನ್​ ಸಿಂಗ್ ಮಾತನಾಡಿ​, ದುಷ್ಕರ್ಮಿಗಳಿಗಾಗಿ ಕೊಂಬಿಂಗ್​ ಕಾರ್ಯಾಚರಣೆ ಆರಂಭಿಸಿದ್ದೇವೆ. ಇದಕ್ಕಾಗಿ ಕನೌಜ್​​​ ಹಾಗೂ ಕಾನ್ಪುರ್​​​​ ದೆಹತ್​​​ನಿಂದಲೂ ಹೆಚ್ಚುವರಿ ಪೊಲೀಸರನ್ನ ಕರೆಯಿಸಿಕೊಳ್ಳಲಾಗಿದೆ. ಶೀಘ್ರವೇ ಅವರನ್ನೆಲ್ಲ ಬಂಧಿಸಿ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಗಾಯಗೊಂಡಿರುವ ಪೊಲೀಸರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಡಿಜಿಪಿ ಸಹ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ವಿಕಾಸ್​​​​​​ ಯಾದವ್​ ಬಂಧನಕ್ಕೆ ಹೋದಾಗ ಘಟನೆ ನಡೆದಿದೆ ಎಂದು ವಿವರಣೆ ನೀಡಿದ್ದಾರೆ.

ರೌಡಿ ಬಂಧನಕ್ಕೆ ಎಸ್​​ಟಿಎಫ್​ ಟೀಂ: ಡಿಜಿಪಿ

ಈ ನಡುವೆ ಎಸ್​​ಟಿಎಫ್​​​​​ ತಂಡ ಘಟನಾ ಸ್ಥಳಕ್ಕೆ ರವಾನೆಯಾಗಿದೆ. ಸ್ಥಳಕ್ಕೆ ತಲುಪಿಸಿರುವ ವಿಶೇಷ ಕಾರ್ಯಪಡೆ ತನ್ನ ಕಾರ್ಯಾಚರಣೆಯನ್ನ ಆರಂಭಿಸಿದೆ ಎಂದು ಡಿಜಿಪಿ ಎಚ್​ ಸಿ ಅವಾಸ್ಥಿ ಹೇಳಿದ್ದಾರೆ.

Last Updated : Jul 3, 2020, 9:04 AM IST

For All Latest Updates

TAGGED:

ABOUT THE AUTHOR

...view details