ತಮಿಳುನಾಡು :ಇಂದು ವಿಮಾನ ನಿಲ್ದಾಣದಲ್ಲಿ ಸಿಐಎಸ್ಎಫ್ ಅಧಿಕಾರಿಯೊಬ್ಬರು ನನಗೆ ಹಿಂದಿ ಗೊತ್ತಿಲ್ಲದ ಕಾರಣ ನನ್ನೊಂದಿಗೆ ತಮಿಳು ಅಥವಾ ಇಂಗ್ಲಿಷ್‌ನಲ್ಲಿ ಮಾತನಾಡಲು ಕೇಳಿದಾಗ ಅವರು 'ನಾನು ಭಾರತೀಯ' ಎಂದು ಹೇಳಿದರು. ಭಾರತೀಯನಾಗಲು ಹಾಗೂ ಹಿಂದಿ ತಿಳಿದುಕೊಳ್ಳುವುದು ಸಮಾನವೇ ಎಂದು ಪ್ರಶ್ನಿಸಿ ದ್ರಾವಿಡ ಮುನ್ನೇತ್ರ ಕಾಳಗಂ(ಡಿಎಂಕೆ) ಪಕ್ಷದ ಮುಖಂಡೆ, ಸಂಸದೆ ಕನಿಮೋಳಿ ಟ್ಟೀಟ್ ಮಾಡಿದ್ದಾರೆ.
ವಿರುಧುನಗರ ಸಂಸದ ಬಿ. ಮಾಣಿಕಂ ಟ್ಯಾಗೋರ್ ಮತ್ತು ಶಿವಗಂಗ ಸಂಸದ ಕಾರ್ತಿ ಚಿದಂಬರಂ ಸೇರಿದಂತೆ ಹಲವಾರು ನಾಯಕರು ಕನಿಮೋಳಿ ಅವರನ್ನು ಬೆಂಬಲಿಸಿ ಟ್ಟೀಟ್ ಮಾಡಿದ್ದಾರೆ.
ಆಡಳಿತಕ್ಕಾಗಿ ಒಂದು ರಾಷ್ಟ್ರ, ಒಂದು ಭಾಷೆ, ಒಂದು ಸಂಸ್ಕ್ರತಿ ಹೆಸರಿನಲ್ಲಿ ಭಾಷೆಯ ಒತ್ತಡ ತರುವುದು ಖಂಡನೀಯ. ಈ ಕುರಿತು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎಂದು ಭಾವಿಸುತ್ತೇನೆ ಎಂದು ಮಾಣಿಕ್ಯಂ ಟ್ಯಾಗೋರ್ ಟ್ಟೀಟ್ ಮಾಡಿದ್ದಾರೆ. ಅಲ್ಲದೆ ಇದು ಸಂಪೂರ್ಣ ಹಾಸ್ಯಾಸ್ಪದ. ಹೆಚ್ಚು ಖಂಡನೀಯ. ಸದ್ಯ ಭಾಷಾ ಪರೀಕ್ಷೆ, ಮುಂದೆ ಏನು? ಸಿಐಎಸ್ಎಫ್ ಇದಕ್ಕೆ ಪ್ರತಿಕ್ರಿಯಿಸಬೇಕು" ಎಂದು ಕಾರ್ತಿ ಚಿದಂಬರಂ ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ಸಿಐಎಸ್ಎಫ್ ಟ್ಟೀಟ್ ಮಾಡುವ ಮೂಲಕ ಸಂಸದರಲ್ಲಿ ಕ್ಷಮೆಯಾಚಿಸಿದೆ. ಅಲ್ಲದೆ ಈ ವಿಷಯದ ಕುರಿತು ಮಾಹಿತಿ ನೀಡುವಂತೆ ಕೋರಿದೆ. ಸಿಐಎಸ್ಎಫ್ ಈ ಬಗ್ಗೆ ತನಿಖೆಗೆ ಆದೇಶಿಸಿದೆ. ಮತ್ತು ಯಾವುದೇ ನಿರ್ದಿಷ್ಟ ಭಾಷೆಯನ್ನು ಒತ್ತಾಯಿಸುವುದು ಸಿಐಎಸ್ಎಫ್ ನೀತಿಯಲ್ಲ ಎಂದು ಸ್ಪಷ್ಟೀಕರಣ ನೀಡಲಾಗಿದೆ.