ಕರ್ನಾಟಕ

karnataka

ETV Bharat / bharat

ಕೊರೊನಾ ರೋಗಿಗಳ ಚಿಕಿತ್ಸೆಗಾಗಿ ಪ್ಲಾಸ್ಮಾ ದಾನ ಮಾಡಲಿರುವ ಕನಿಕಾ ಕಪೂರ್ ! - ಕನ್ವಲ್ಸೆಂಟ್ ಪ್ಲಾಸ್ಮಾ

ಕೋವಿಡ್​-19 ಚಿಕಿತ್ಸೆಗಾಗಿ ಕನ್ವಲ್ಸೆಂಟ್ ಪ್ಲಾಸ್ಮಾ ವಿಧಾನವನ್ನು ಪ್ರಾಯೋಗಿಕವಾಗಿ ಬಳಸಲಾಗುತ್ತಿದೆ. ಈ ವಿಧಾನದಲ್ಲಿ ಕೊರೊನಾದಿಂದ ಗುಣಮುಖರಾದವರ ಪ್ಲಾಸ್ಮಾ (ರಕ್ತದ ಕಣ) ವನ್ನು ಗಂಭೀರ ಕೊರೊನಾ ಪೀಡಿತ ರೋಗಿಗಳ ದೇಹಕ್ಕೆ ವರ್ಗಾಯಿಸಲಾಗುತ್ತದೆ.

Kanika Kapoor will donate plasma
Kanika Kapoor will donate plasma

By

Published : Apr 27, 2020, 10:26 PM IST

ಲಖನೌ: ಕೊರೊನಾ ವೈರಸ್​ ಸೋಂಕಿನಿಂದ ಬಳಲಿ ಸುದೀರ್ಘ ಹೋರಾಟದ ನಂತರ ಗುಣಮುಖರಾದ ಬಾಲಿವುಡ್​ನ ಖ್ಯಾತ ಗಾಯಕಿ ಕನಿಕಾ ಕಪೂರ್​ ಈಗ ತಮ್ಮ ಪ್ಲಾಸ್ಮಾ ದಾನ ಮಾಡಲು ಮುಂದಾಗಿದ್ದಾರೆ. ಲಖನೌದಲ್ಲಿರುವ ಕಿಂಗ್​ ಜಾರ್ಜ್​ ಮೆಡಿಕಲ್​ ಯುನಿವರ್ಸಿಟಿ ಆಸ್ಪತ್ರೆಯಲ್ಲಿ (ಕೆಜಿಎಂಯು) ಹಲವಾರು ದಿನಗಳ ಕಾಲ ಚಿಕಿತ್ಸೆ ಪಡೆದಿದ್ದ ಕನಿಕಾ, ಕೊರೊನಾ ಮುಕ್ತರಾಗಿ ಕೆಲದಿನಗಳ ಹಿಂದೆ ಡಿಸ್ಚಾರ್ಜ್ ಆಗಿದ್ದರು. ಇಲ್ಲಿಂದ ಕೊರೊನಾ ಮುಕ್ತರಾದ ಅನೇಕರು ಈಗಾಗಲೇ ತಮ್ಮ ಪ್ಲಾಸ್ಮಾ ನೀಡಿದ್ದಾರೆ. ಸದ್ಯ ಕನಿಕಾ ಕಪೂರ್​ ಸಹ ಕೊರೊನಾ ವೈರಸ್​ ಚಿಕಿತ್ಸೆಗೆ ತಮ್ಮ ಸಹಕಾರ ನೀಡುವ ನಿಟ್ಟಿನಲ್ಲಿ ಪ್ಲಾಸ್ಮಾ ನೀಡಲು ನಿರ್ಧರಿಸಿದ್ದಾರೆ.

ಈಗಾಗಲೇ ಈ ಕುರಿತು ಕನಿಕಾ ಕಪೂರ್​ ಕೆಜಿಎಂಯು ಆಸ್ಪತ್ರೆಯೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾತನಾಡಿದ ಕೆಜಿಎಂಯು ಕುಲಪತಿ ಪ್ರೊ. ಎಂಎಲ್​ಬಿ ಭಟ್, "ಕನಿಕಾ ಕಪೂರ್​ ಪ್ಲಾಸ್ಮಾ ದಾನ ಮಾಡಲು ಬಯಸಿದ ವಿಷಯ ತಿಳಿದಿದೆ. ಸೋಂಕು ತಗುಲಿದ ವ್ಯಕ್ತಿಗಳ ಚಿಕಿತ್ಸೆಗಾಗಿ ಗಾಯಕಿ ಕನಿಕಾ ಕಪೂರ್​ ಅವರ ಪ್ಲಾಸ್ಮಾ ದಾನ ಮಾಡುವ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ." ಎಂದು ಹೇಳಿದ್ದಾರೆ.

ಕೋವಿಡ್​-19 ಚಿಕಿತ್ಸೆಗಾಗಿ ಕನ್ವಲ್ಸೆಂಟ್ ಪ್ಲಾಸ್ಮಾ ವಿಧಾನವನ್ನು ಪ್ರಾಯೋಗಿಕವಾಗಿ ಬಳಸಲಾಗುತ್ತಿದೆ. ಈ ವಿಧಾನದಲ್ಲಿ ಕೊರೊನಾದಿಂದ ಗುಣಮುಖರಾದವರ ಪ್ಲಾಸ್ಮಾ (ರಕ್ತದ ಕಣ) ವನ್ನು ಗಂಭೀರ ಕೊರೊನಾ ಪೀಡಿತ ರೋಗಿಗಳ ದೇಹಕ್ಕೆ ವರ್ಗಾಯಿಸಲಾಗುತ್ತದೆ. ವೈರಸ್​ನಿಂದ ಗುಣಮುಖರಾದವರ ರಕ್ತದಲ್ಲಿ ವೈರಸ್​ ವಿರುದ್ಧ ಹೋರಾಡುವ ಪ್ರತಿಕಾಯಗಳು ನಿರ್ಮಾಣವಾಗಿರುತ್ತವೆ. ಅಂದರೆ ರೋಗಮುಕ್ತರಾದವರ ರಕ್ತದಲ್ಲಿನ ರೋಗನಿರೋಧಕ ಶಕ್ತಿಯನ್ನು ರೋಗಿಗಳ ದೇಹಕ್ಕೆ ವರ್ಗಾಯಿಸುವುದು ಕನ್ವಲ್ಸೆಂಟ್ ಪ್ಲಾಸ್ಮಾ ಥೆರಪಿಯಾಗಿದೆ.

ABOUT THE AUTHOR

...view details