ಬಿಹಾರ:ಕೇಂದ್ರ ಗೃಹ ಸಚಿವರು ನಮ್ಮನ್ನು ತುಕ್ಡೆ-ತುಕ್ಡೆ ಗ್ಯಾಂಗ್ ಎಂದು ಕರೆಯುತ್ತಾರೆ. ಆದರೆ ನಾವೆಂದಿಗೂ ದೇಶ ಮುರಿಯುವ ಕೆಲಸ ಮಾಡುತ್ತಿಲ್ಲ ಎಂದು ಅಮಿತ್ ಶಾ ಅವರ ವಿರುದ್ಧ ಸಿಪಿಐ ಮುಖಂಡ ಕನ್ಹಯ್ಯ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ನಾವು ದೇಶ, ಸಂವಿಧಾನ ಮುರಿಯುವ ಕೆಲಸ ಮಾಡುತ್ತಿಲ್ಲ: ಶಾ ವಿರುದ್ಧ ಕನ್ಹಯ್ಯ ಗುಡುಗು - ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ ಕನ್ಹಯ್ಯ ಕುಮಾರ್
ಕೇಂದ್ರ ಗೃಹ ಸಚಿವರು ನಮ್ಮನ್ನು ತುಕ್ಡೆ-ತುಕ್ಡೆ ಗ್ಯಾಂಗ್ ಎಂದು ಕರೆಯುತ್ತಾರೆ. ಆದರೆ ನಾವೆಂದಿಗೂ ದೇಶ ಮುರಿಯುವ ಕೆಲಸ ಮಾಡುತ್ತಿಲ್ಲ ಎಂದು ಅಮಿತ್ ಶಾ ಅವರ ವಿರುದ್ಧ ಸಿಪಿಐ ಮುಖಂಡ ಕನ್ಹಯ್ಯ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಸಿಎಎ ರ್ಯಾಲಿ
ಗಯಾದಲ್ಲಿ ನಡೆದ ಸಾರ್ವಜನಿಕ ಸಭೆ
ಗಯಾದ ಗಾಂಧಿ ಮೈದಾನದಲ್ಲಿ ಸಿಎಎ ವಿರುದ್ಧ ನಡೆದ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಕನ್ಹಯ್ಯ ಕುಮಾರ್ ನಾವು ದೇಶ ಮುರಿಯುವ ಕೆಲಸ ಮಾಡುತ್ತಿಲ್ಲ ಅದು ಬಿಜೆಪಿಯವರ ಕೆಲಸವೆಂದು ಹೇಳಲು ಭಯಸುತ್ತೇನೆ.ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧದ ಈ ಆಂದೋಲನವು ಸಂವಿಧಾನವನ್ನು ಮುರಿಯುವುದಲ್ಲ, ಈ ದೇಶದ ಸಂಸ್ಕೃತಿ ಮತ್ತು ಇತಿಹಾಸವನ್ನು ಉಳಿಸುವುದಾಗಿದೆ ಎಂದು ಹೇಳಿದರು.