ಮುಂಬೈ: ಮುಂಬೈನಲ್ಲಿರುವ ತಮ್ಮ ಗೃಹ ಕಚೇರಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕ ಶರದ್ ಪವಾರ್ಗೆ ಸೇರಿದ್ದು ಎಂದು ಬಾಲಿವುಡ್ ನಟಿ ಕಂಗನಾ ರನೌತ್ ಸ್ಪಷ್ಟನೆ ನೀಡಿದ್ದಾರೆ.
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಶರದ್ ಪವಾರ್, ಕಂಗನಾರ ಆರೋಪವನ್ನು ಅಲ್ಲಗಳೆದಿದ್ದಾರೆ. ಜೊತೆಗೆ ಆಕೆಯ ಆರೋಪ ಸಾಕ್ಷ್ಯ ರಹಿತ ಎಂದು ತಿರುಗೇಟು ನೀಡಿದ್ದಾರೆ.
ಮುಂಬೈಯನ್ನು ಪಾಕ್ಗೆ ಹೋಲಿಸಿದ್ದ ಅವರು ವಿವಾದದ ಕೇಂದ್ರ ಬಿಂದುವಾಗಿದ್ದರು. ಇದರ ಜೊತೆಗೆ ಅಲ್ಲಿನ ಶಿವಸೇನೆಯನ್ನು ಟೀಕಿಸಿದ್ದರು, ರಾಜ್ಯ ನಾಯಕರ ವಿರೋಧ ಕಟ್ಟಿಕೊಂಡಿದ್ದರು.
ಈ ಪ್ರಕರಣ ನನ್ನ ಫ್ಲಾಟ್ಗೆ ಸಂಬಂಧಿಸಿದ್ದಲ್ಲ. ಇದು ಕಟ್ಟಡಕ್ಕೆ ಸಂಬಂಧಿಸಿದ ವಿಚಾರ. ಇದನ್ನು ಕಟ್ಟಡದ ಮಾಲೀಕ ನಿಭಾಯಿಸಬೇಕು ಎಂದು ಟ್ವೀಟ್ ಮಾಡಿರುವ ಕಂಗನಾ, ಇದು ಶರದ್ ಪವಾರ್ ಅವರಿಗೆ ಸೇರಿದ ಕಟ್ಟಡವಾಗಿದ್ದು, ಅವರ ಪಾಲುದಾರರ ಮೂಲಕ ಫ್ಲಾಟ್ ಖರೀದಿಸಿದ್ದೇವೆ ಎಂದು ಟ್ವೀಟೋಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಕೆಲವು ದಿನಗಳ ಹಿಂದೆ ಕಚೇರಿಯನ್ನು ತೆರವುಗೊಳಿಸದಂತೆ ಬೃಹನ್ ಮುಂಬೈ ಮಹಾನಗರ ಪಾಲಿಕೆ ವಿರುದ್ಧ ಕಂಗನಾ ಬಾಂಬೆ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಗೆ ಮನ್ನಣೆ ದೊರತಿದ್ದು, ಬಿಎಂಸಿ ಕಾರ್ಯಾಚರಣೆಗೆ ತಾತ್ಕಾಲಿಕ ತಡೆ ನೀಡಿ ಸೆಪ್ಟೆಂಬರ್ 22ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.