ಮುಂಬೈ:ಬಾಲಿವುಡ್ ನಟಿ ಕಂಗನಾ ರಣಾವತ್ ಹಾಗೂ ಮಹಾರಾಷ್ಟ್ರ ಸರ್ಕಾರದ ನಡುವಿನ ಮುಸುಕಿನ ಗುದ್ದಾಟ ಮುಂದುವರೆದಿದ್ದು, ಇದೇ ವಿಚಾರವಾಗಿ ನಟಿ ಕಂಗನಾ ತಾಯಿ ಆಶಾ ಮಾತನಾಡಿದ್ದಾರೆ.
ಇಷ್ಟು ದಿನ ಕುಟುಂಬ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠಾವಂತವಾಗಿತ್ತು. ಆದರೆ ಇದೀಗ ಬಿಜೆಪಿಗೆ ಬೆಂಬಲಿಸುವುದಾಗಿ ಆಶಾ ರಣಾವತ್ ಹೇಳಿದ್ದಾರೆ. ಮನಾಲಿಯಿಂದ ಮುಂಬೈಗೆ ಬರಲು ಕಂಗನಾಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭದ್ರತೆ ನೀಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿರುವ ಅವರು, ನನ್ನ ಮಗಳು ಯಾವಾಗಲೂ ಸತ್ಯದ ಪರವಾಗಿ ನಿಂತಿದ್ದಾರೆ ಎಂದಿದ್ದಾರೆ.
ಕಂಗನಾ ಭೇಟಿ ಮಾಡಿದ ರಾಮನಾಥ್ ಅಠಾವಳೆ ನನ್ನ ಮಗಳಿಗೆ ಎಲ್ಲೆಡೆಯಿಂದ ಬೆಂಬಲ ವ್ಯಕ್ತವಾಗುತ್ತಿದೆ. ನಾವು ಬಿಜೆಪಿ ಜತೆ ಯಾವುದೇ ಸಂಬಂಧ ಹೊಂದಿಲ್ಲ. ಮೂಲತ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠಾವಂತರಾಗಿದ್ದೇವು. ನನ್ನ ಅಜ್ಜ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು. ಆದರೆ ಇದೀಗ ನಮಗೆ ಬಿಜೆಪಿ ಬೆಂಬಲಿಸಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದ ಹೇಳಿರುವ ಆಶಾ ರಣಾವತ್, ಮಹಾರಾಷ್ಟ್ರ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ನಿಜಕ್ಕೂ ಖಂಡನೀಯ ಎಂದಿದ್ದಾರೆ.
ಕಂಗನಾ ಮನೆಗೆ ಕೇಂದ್ರ ಸಚಿವ ಭೇಟಿ
ಕಂಗನಾ ರಣಾವತ್ ಕಚೇರಿ ಮುಂಬೈ ಮಹಾನಗರ ಪಾಲಿಕೆಯಿಂದ ಧ್ವಂಸಗೊಂಡಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಭೇಟಿ ನೀಡಿ ಮಾತುಕತೆ ನಡೆಸಿದರು. ಇದಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕಂಗನಾ ರಣಾವತ್ಗೆ ರಾಜಕೀಯ ಸೇರುವ ಆಸೆ ಇಲ್ಲ. ಆದರೆ ಸಮಾಜದಲ್ಲಿ ಐಕ್ಯತೆ ಸ್ಥಾಪಿಸಲು ಆಸಕ್ತಿ ಹೊಂದಿದ್ದಾರೆ. ಮುಂಬರುವ ಚಿತ್ರದಲ್ಲಿ ತಾವು ದಲಿತ ಪಾತ್ರ ನಿರ್ವಹಿಸಲು ಮುಂದಾಗಿದ್ದು, ಜಾತಿ ವ್ಯವಸ್ಥೆ ರದ್ದುಗೊಳಿಸಬೇಕು ಎಂಬುದು ಅವರ ಇರಾದೆಯಾಗಿದೆ ಎಂದರು. ಒಂದು ವೇಳೆ ಅವರು ಬಿಜೆಪಿ ಸೇರಿಕೊಳ್ಳುವ ಇಷ್ಟವಿದ್ದರೆ ಸ್ವಾಗತ ಎಂದು ಹೇಳಿದ್ದಾರೆ.