ನವದೆಹಲಿ: ತನ್ನ ಹುಟ್ಟೂರು ಮನಾಲಿಯಲ್ಲಿ ಕುಟುಂಬದೊಂದಿಗೆ ನಟಿ ಕಂಗನಾ ರಣಾವತ್ ಕಾಲ ಕಳೆಯುತ್ತಿದ್ದಾರೆ. ಅವರು, ತಾವು ಮುಂಬೈ ಲೈಫ್ ನ ಏನೋ ಒಂದನ್ನು ಹೆಚ್ಚು ಮಿಸ್ ಮಾಡ್ಕೊಳ್ತಾರಂತೆ. ಅದೇನು ಅಂತ ಕ್ವೀನ್ ನಟಿ ಕಂಗನಾ ಬಹಿರಂಗಪಡಿಸಿದ್ದಾರೆ.
ಮುಂಬೈ ಲೈಫ್ ನ ಹೆಚ್ಚು ಪ್ರಿಯವಾದ ಏನನ್ನೋ ತುಂಬಾ ಮಿಸ್ ಮಾಡ್ಕೊಳ್ತಿದಾರಂತೆ ಕಂಗನಾ
ಕ್ವೀನ್ ನಟಿ ಕಂಗನಾ ಮುಂಬೈ ಲೈಫ್ ನ ಯಾವುದನ್ನು ಹೆಚ್ಚು ಮಿಸ್ ಮಾಡಿಕೊಳ್ಳುತ್ತಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಈ ಕುರಿತು ಹಳೆಯ ಫೋಟೋಗಳನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
ಮುಂಬೈ ಲೈಫ್ ನ ಹೆಚ್ಚು ಪ್ರಿಯವಾದ ಏನನ್ನೋ ತುಂಬಾ ಮಿಸ್ ಮಾಡ್ತಿದ್ದಾರಂತೆ ಕಂಗನಾ
ಕಂಗನಾ ಮುಂಬೈನ ರೇಸ್ ಕೋರ್ಸ್ನಲ್ಲಿ ಆನಂದಿಸುತ್ತಿದ್ದ ಕುದುರೆ ಸವಾರಿಯನ್ನು ಹೆಚ್ಚು ಮಿಸ್ ಮಾಡ್ಕೊಳ್ತಾರಂತೆ. ನಟಿ ತಮ್ಮ ಟ್ವಿಟರ್ ಖಾತೆಯಲ್ಲಿ ಕುದುರೆ ಸವಾರಿಯ ಒಂದಿಷ್ಟು ಹಳೆಯ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಮನದಾಳವನ್ನು ಹಂಚಿಕೊಂಡಿದ್ದಾರೆ.
ತನ್ನ ಕುದುರೆಯನ್ನು ತನ್ನ "ಮೆಡಿಟೇಟಿವ್ ಪಾರ್ಟ್ನರ್" ಎಂದಿರುವ ಕಂಗನಾ, ಕುದುರೆ ಸವಾರಿಯ ಆನಂದದ ಬಗ್ಗೆ ಕಿರು ಟಿಪ್ಪಣಿಯನ್ನು ಬರೆಯುವ ಮೂಲಕ ತನ್ನ ಮನದಾಳ ವ್ಯಕ್ತಪಡಿಸಿದ್ದಾರೆ.