ಮುಂಬೈ:ಪ್ರಸಕ್ತ ಸಾಲಿನ ಪದ್ಮ ಪ್ರಶಸ್ತಿಗಳು ಪ್ರಕಟಗೊಂಡಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಈ ಅತ್ಯುನ್ನತ ಪ್ರಶಸ್ತಿ ನೀಡಿ ಸರ್ಕಾರ ಗೌರವಿಸಲಿದೆ. ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ನಾಲ್ವರು ಗಣ್ಯರಿಗೆ ಈ ಗೌರವ ನೀಡಲಾಗಿದೆ.
ಕಂಗನಾ, ಏಕ್ತಾ ಸೇರಿ ಬಾಲಿವುಡ್ ಸೆಲೆಬ್ರಿಟಿಗಳಿಗೂ ಪದ್ಮಶ್ರೀ... ನನ್ನ ದೇಶಕ್ಕೆ ಕೃತಜ್ಞತೆ ಎಂದ ನಟಿ! - ಬಾಲಿವುಡ್ ಸೆಲೆಬ್ರೆಟಿಗಳಿಗೂ ಪದ್ಮಶ್ರೀ
ಸಿನಿಮಾ ಕ್ಷೇತ್ರದಲ್ಲೂ ಪದ್ಮಶ್ರೀ ಪ್ರಶಸ್ತಿಗೆ ಕೆಲ ಸಾಧಕರು ಭಾಜನರಾಗಿದ್ದು, ನಾಲ್ವರು ಸಾಧಕರು ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ಬಾಲಿವುಡ್ನ ನಟಿ ಕಂಗನಾ ರಣಾವತ್, ನಿರ್ದೇಶಕರು-ನಿರ್ಮಾಪಕರಾಗಿರುವ ಏಕ್ತಾ ಕಪೂರ್ ಮತ್ತು ಕರಣ್ ಜೋಹರ್, ಗಾಯಕ ಅದ್ನಾನ್ ಸಮಿ ಪ್ರಸಕ್ತ ವರ್ಷದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಂಗನಾ ಸಂತಸ
ಪದ್ಮಶ್ರೀ ಪ್ರಶಸ್ತಿಗೆ ಕಂಗನಾ ಆಯ್ಕೆಗೊಂಡಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದ್ದು, ಈ ಗೌರವಕ್ಕಾಗಿ ಆಯ್ಕೆ ಮಾಡಿದ್ದಕ್ಕಾಗಿ ನನ್ನ ದೇಶಕ್ಕೆ ಕೃತಜ್ಞತೆಗಳು. ಕನಸು ಈಡೇರಿಸಿಕೊಳ್ಳಲು ಧೈರ್ಯವಿರುವ ಪ್ರತಿಯೊಬ್ಬ ಮಹಿಳೆಗೆ ನಾನು ಈ ಪ್ರಶಸ್ತಿ ಅರ್ಪಿಸುತ್ತೇನೆ.ಪ್ರತಿಯೊಬ್ಬ ಮಗಳಿಗೆ ... ಪ್ರತಿಯೊಬ್ಬ ತಾಯಿಗೆ ... ನಮ್ಮ ದೇಶದ ಭವಿಷ್ಯವನ್ನು ರೂಪಿಸುವ ಮಹಿಳೆಯರ ಕನಸುಗಳಿಗೆ ಈ ಪ್ರಶಸ್ತಿ ಅರ್ಪಣೆ ಎಂದು ಟ್ವೀಟ್ ಮಾಡಿದ್ದಾರೆ.