ಮುಂಬೈ:ಬಾಲಿವುಡ್ ನಟಿಯರಾದ ಕಂಗನಾ ರಣಾವತ್ ಮತ್ತು ತಾಪ್ಸಿ ಪನ್ನು ನಡುವಿನ ಶೀತಲ ಸಮರ ಗುರುವಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಪರಸ್ಪರ ಜಗಳಕ್ಕೆ ಇಳಿದಿದ್ದಾರೆ.
ನಾವು ಇತರರಿಗೆ 'ಪ್ರಚಾರದ ಶಿಕ್ಷಕರಾಗುವುದಿಲ್ಲ'. ಕೇವಲ ಒಂದು ಟ್ವೀಟ್, ಒಂದು ಜೋಕ್ ಅಥವಾ ಕಾರ್ಯಕ್ರಮದಿಂದ ನಿಮ್ಮ ಒಗ್ಗಟ್ಟು, ನಂಬಿಕೆ ಮತ್ತು ಧಾರ್ಮಿಕ ಶ್ರದ್ಧೆ ಅಲುಗಾಡುತ್ತದೆ ಎಂದಾದರೆ. ಮೊದಲು ನಿಮ್ಮ ಮೌಲ್ಯವನ್ನು ಗಟ್ಟಿಗೊಳಿಸುವ ಕೆಲಸ ಮಾಡಿ. ಅದನ್ನು ಬಿಟ್ಟು ಬೇರೆಯವರಿಗೆ ಪ್ರಚಾರದ ಪಾಠ ಕಲಿಸಲು ಬರಬೇಡಿ ಎಂದು ಹೆಸರನ್ನು ಉಲ್ಲೇಖಿಸದೇ ತಾಪ್ಸಿ ಟ್ವೀಟ್ ಮಾಡಿದ್ದಾರೆ.