ಕರ್ನಾಟಕ

karnataka

ETV Bharat / bharat

'ಡೆಸ್ಟಿನೇಶನ್​ ವೆಡ್ಡಿಂಗ್': ಹೊಸ ವರ್ಷಕ್ಕೆ ಸರ್ಕಾರದ ವಿಶೇಷ ಉಡುಗೊರೆ - ಕಮಲ್​ ನಾಥ್​ ಸರ್ಕಾರ ಲೇಟೆಸ್ಟ್​ ಸುದ್ದಿ

ಇನ್ನು ಮೂರೇ ಮೂರು ದಿನಗಳಲ್ಲಿ 2019 ಅಂತ್ಯವಾಗಲಿದ್ದು, ಮಧ್ಯಪ್ರದೇಶದ ಸಿಎಂ ಕಮಲ್‌​ ನಾಥ್​ ಸರ್ಕಾರವು 2020 ರ ಹೊಸ ವರ್ಷವನ್ನು ರಾಜ್ಯದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್‌ನೊಂದಿಗೆ ಪ್ರಾರಂಭಿಸಲಿದೆ.

destination wedding
ಡೆಸ್ಟಿನೇಶನ್​ ವೆಡ್ಡಿಂಗ್

By

Published : Dec 28, 2019, 12:48 PM IST

ಭೋಪಾಲ್​: ಮಧ್ಯಪ್ರದೇಶ ಸರ್ಕಾರವು ಜನರಿಗೆ ವಿಶೇಷ ಉಡುಗೊರೆಯೊಂದನ್ನು ನೀಡುವ ಮೂಲಕ 2020 ರ ಹೊಸ ವರ್ಷದ ಆರಂಭಕ್ಕೆ ಮುಂದಾಗಿದೆ. ಇನ್ನು ಮೂರೇ ಮೂರು ದಿನಗಳಲ್ಲಿ 2019 ಅಂತ್ಯವಾಗಲಿದ್ದು, ಸಿಎಂ ಕಮಲ್​ ನಾಥ್​ ಸರ್ಕಾರವು 2020 ರ ಹೊಸ ವರ್ಷವನ್ನು ರಾಜ್ಯದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್‌ನೊಂದಿಗೆ ಪ್ರಾರಂಭಿಸಲಿದೆ.

ಹೊಸ ವರ್ಷಕ್ಕೆ ಮಧ್ಯ ಪ್ರದೇಶ ಸರ್ಕಾರದ ವಿಶೇಷ ಉಡುಗೊರೆ

ಅನೇಕ ಮಂದಿ ತಮ್ಮ ವಿವಾಹವನ್ನು ವಿಶೇಷವಾಗಿ, ವಿಶೇಷ ಸ್ಥಳಗಳಲ್ಲಿ ಮಾಡಿಕೊಳ್ಳಲು ಇಚ್ಛಿಸುತ್ತಾರೆ. ಇಂತಹ ಡೆಸ್ಟಿನೇಶನ್ ವೆಡ್ಡಿಂಗ್​ಗಳು ಅವಿಸ್ಮರಣೀಯ ಅನುಭವಗಳನ್ನು ಸಹ ನೀಡುತ್ತವೆ. ರಾಜ್ಯದ ಜನರು ಇಲ್ಲಿಯವರೆಗೆ ಗುಜರಾತ್‌, ರಾಜಸ್ಥಾನಗಳಿಗೆ ಹೋಗಿ ಡೆಸ್ಟಿನೇಶನ್ ವೆಡ್ಡಿಂಗ್‌ ಮಾಡಿಕೊಳ್ಳುತ್ತಿದ್ದರು. ಆದರೆ ಇನ್ನು ಮುಂದೆ ತಮ್ಮ ರಾಜ್ಯದ ಐತಿಹಾಸಿಕ ಹಾಗೂ ಪಾರಂಪರಿಕ ಕಟ್ಟಡ, ಕೋಟೆ, ಅರಮನೆ, ಸರೋವರಗಳಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್​​ಗೆ ಅವಕಾಶ ನೀಡಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.

ರಾಜಮನೆತನದ ಕೋಟೆಗಳು, ಅರಮನೆಗಳು ಮತ್ತು ಸರೋವರಗಳ ನಡುವೆ ನಡೆಯುವ ಗಮ್ಯಸ್ಥಾನ ವಿವಾಹವು, ಪ್ರವಾಸೋದ್ಯಮವನ್ನು ಹೆಚ್ಚಿಸುವುದಲ್ಲದೆ, ರಾಜ್ಯವನ್ನು ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಸಹಾಯ ಮಾಡಲಿದೆ. ಆದರೆ ಇದಕ್ಕೆ ವಾಯು ಸಂಪರ್ಕವು ದೊಡ್ಡ ಸಮಸ್ಯೆಯಾಗಿದ್ದು, ಇದನ್ನು ಸರ್ಕಾರ ಶೀಘ್ರದಲ್ಲಿಯೇ ನಿವಾರಿಸಲಿದೆ. ಇದಕ್ಕಾಗಿ ಸರ್ಕಾರ ಹಲವಾರು ವಿಮಾನಯಾನ ಸಂಸ್ಥೆಗಳೊಂದಿಗೆ ಚರ್ಚಿಸುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸುರೇಂದ್ರ ಸಿಂಗ್ ಬಗೇಲ್​ ಹೇಳಿದ್ದಾರೆ.

ABOUT THE AUTHOR

...view details