ಚೆನ್ನೈ(ತಮಿಳುನಾಡು): ದೇಶಾದ್ಯಂತ ಪೌರತ್ವ ಕಾಯ್ದೆ ತಿದ್ದುಪಡಿ ವಿರುದ್ಧ ಪರ-ವಿರೋಧ ಪ್ರತಿಕ್ರಿಯೆ, ಪ್ರತಿಭಟನೆಗಳು ನಡೆಯುತ್ತಿವೆ. ಇದೇ ವಿಚಾರವಾಗಿ ದಕ್ಷಿಣ ಭಾರತದ ಮೇರು ನಟ ಕಮಲ್ ಹಾಸನ್ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ಈ ಮಸೂದೆಯನ್ನು ಟೀಕಿಸಿದ ಅವರು, ಇದು ಆರೋಗ್ಯಯುತ ವ್ಯಕ್ತಿಯ ಮೇಲೆ ಶಸ್ತ್ರಚಿಕಿತ್ಸೆ ಮಾಡಿದ ರೀತಿಯಲ್ಲಿದೆ ಎಂದು ಕಿಡಿ ಕಾರಿದ್ದಾರೆ.
ಆರೋಗ್ಯಯುತ ವ್ಯಕ್ತಿಯ ಮೇಲೆ ಶಸ್ತ್ರಚಿಕಿತ್ಸೆಗೆ ಯತ್ನಿಸಿದ ರೀತಿಯಿದೆ ಕೇಂದ್ರದ ನಿರ್ಧಾರ: ಕಮಲ್ ಹಾಸನ್ - ನಟ ಕಮಲ್ ಹಾಸನ್ ಪೌರತ್ವ ತಿದ್ದುಪಡಿ ಕಾಯ್ದೆ
ಕೇಂದ್ರ ಸರ್ಕಾರ ದೇಶವ್ಯಾಪಿ ಜಾರಿಗೆ ತರಲು ನಿರ್ಧರಿಸಿರುವ 'ಪೌರತ್ವ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ' ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.
ನಟ ಹಾಗು ಮಕ್ಕಳ್ ನೀಧಿ ಮಯಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಪ್ರತಿಕ್ರಿಯಿಸಿ, ಇದೊಂದು ಮೂರ್ಖತನದ ನಿರ್ಧಾರ. ಯಂಗ್ ಇಂಡಿಯಾ ಆದಷ್ಟು ಬೇಗ ಈ ನಿರ್ಧಾರ ತಿರಸ್ಕರಿಸಲಿದೆ. ನಿಮ್ಮ ಹಳೇ ಯೋಜನೆ ಇಲ್ಲಿ ಕಾರ್ಯರೂಪಕ್ಕೆ ತರಲು ಇದು ಪ್ರಾಚೀನ ಭಾರತವಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂವಿಧಾನದಲ್ಲಿ ಯಾವುದಾದರೂ ಬದಲಾವಣೆಗಳಿದ್ದರೆ ಅವುಗಳನ್ನ ತಿದ್ದುಪಡಿ ಮೂಲಕ ಸರಿ ಮಾಡಬಹುದು. ಆದರೆ ಇಷ್ಟೊಂದು ದೊಡ್ಡಮಟ್ಟದ ಮಸೂದೆ ತಿದ್ದುಪಡಿ ಮಾಡುತ್ತಿರುವುದು ನಿಜಕ್ಕೂ ವಿಷಾದದ ವಿಚಾರ. ಈ ಕ್ರಮ ತೆಗೆದುಕೊಳ್ಳುವುದರಿಂದ ಕೇಂದ್ರ ಸರ್ಕಾರ ಅತಿದೊಡ್ಡ ಅಪರಾಧ ಎಸಗುತ್ತಿದೆ ಎಂದು ಟೀಕಿಸಿದ್ದಾರೆ.