ಹೌರಾ:ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದು ಹೇಳಿದ ಮರುದಿನವೇ ನಟ ಹಾಗೂ ಮಕ್ಕಳ್ ನೀದಿ ಮಯ್ಯಮ್ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯನ್ನು ಭೇಟಿ ಮಾಡಿದ್ದಾರೆ.
ಮಕ್ಕಳ್ ನೀದಿ ಮಯ್ಯಮ್ ಪಕ್ಷವನ್ನು ಸ್ಥಾಪಿಸಿರುವ ಕಮಲ್, ಈಗಾಗಲೇ ತಮಿಳುನಾಡು ಹಾಗೂ ಪುದುಚೇರಿ ಕ್ಷೇತ್ರಗಳಲ್ಲಿನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ.