ತಮಿಳುನಾಡು:'ಇಂಡಿಯನ್ 2' ಚಿತ್ರದ ಸೆಟ್ನಲ್ಲಿ ಸಂಭವಿಸಿದ ಕ್ರೇನ್ ಅಪಘಾತದಲ್ಲಿ ಮೂವರು ಮೃತಪಟ್ಟ ಹಿನ್ನೆಲೆ ನಟ ಕಮಲ್ ಹಾಸನ್ ಹಾಗೂ ಪ್ರೋಡಕ್ಷನ್ ಹೌಸ್ ಲೈಕಾದಿಂದ ಸಂತಾಪ ಸೂಚಿಸಿದ್ದಾರೆ. ಅಲ್ಲದೇ ದುರ್ಘಟನೆಯಿಂದ ತಾವು ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾಗಿ ಹೇಳಿದ್ದಾರೆ.
ಮೂವರು ಅತ್ಯಂತ ಶ್ರಮಶೀಲ ತಂತ್ರಜ್ಞರ ಸಾವಿನ ಕುರಿತು ಟ್ವೀಟ್ ಮಾಡಿರುವ ನಟ ಕಮಲ್ ಹಾಸನ್, ನಾನು ಜೀವನದಲ್ಲಿ ಇಂತಹ ಸಾಕಷ್ಟು ಅಪಘಾತಗಳನ್ನು ಎದುರಿಸಿದ್ದೇನೆ. ಆದ್ರೆ ಇದು ಅತ್ಯಂತ ಭಯಾನಕವಾಗಿತ್ತು ಹಾಗೂ ನನ್ನ ಮೂವರು ಸಹೋದ್ಯೋಗಿಗಳನ್ನು ಕಳೆದುಕೊಂಡಿದ್ದೇನೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ. ನನ್ನ ನೋವಿಗಿಂತ ಹೆಚ್ಚಾಗಿ, ಅವರನ್ನು ಕಳೆದುಕೊಂಡ ಕುಟುಂಬದ ದುಃಖವು ಅನೇಕ ಪಟ್ಟು ಹೆಚ್ಚಿದೆ ಹಾಗಾಗಿ ಅವರಲ್ಲಿ ಒಬ್ಬನಾಗಿ ಅವರ ದುಃಖದಲ್ಲಿ ನಾನು ಭಾಗವಹಿಸುತ್ತೇನೆ ಎಂದಿದ್ದಾರೆ.