ಹೈದರಾಬಾದ್: ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಎನ್‌ಜಿ–14 ಸಿಗ್ನಸ್ ಎಂಬ ಬಾಹ್ಯಾಕಾಶ ನೌಕೆಗೆ ಭಾರತೀಯ ಮೂಲದ ಗಗನಯಾತ್ರಿ ದಿವಂಗತ ಕಲ್ಪನಾ ಚಾವ್ಲಾ ಅವರ ಹೆಸರು ಇಟ್ಟಿದ್ದಕ್ಕೆ ಅವರ ಪತಿ ಜೀನ್ ಪೈರೆ ಹ್ಯಾರಿಸನ್ ಸಂತಸ ವ್ಯಕ್ತಪಡಿಸಿದ್ದಾರೆ.
ನಾಸಾದಿಂದ ಕಲ್ಪನಾ ಚಾವ್ಲಾ ಹೆಸರಿನ ಬಾಹ್ಯಾಕಾಶ ನೌಕೆ ಉಡಾವಣೆ: ಸಂತಸ ವ್ಯಕ್ತಪಡಿಸಿದ ಪತಿ - ಕಲ್ಪನಾ ಚಾವ್ಲಾ ಪತಿ
ಎನ್‌ಜಿ–14 ಸಿಗ್ನಸ್ ಎಂಬ ಬಾಹ್ಯಾಕಾಶ ನೌಕೆಗೆ ಭಾರತೀಯ ಮೂಲದ ಗಗನಯಾತ್ರಿ ದಿವಂಗತ ಕಲ್ಪನಾ ಚಾವ್ಲಾ ಅವರ ಹೆಸರು ಇಟ್ಟಿದ್ದಕ್ಕೆ ಅವರ ಪತಿ ಜೀನ್ ಪೈರೆ ಹ್ಯಾರಿಸನ್ ಸಂತಸ ವ್ಯಕ್ತಪಡಿಸಿದ್ದಾರೆ.
ಕಲ್ಪನಾ ಚಾವ್ಲಾ ಪತಿಯಿಂದ ಸಂತಸ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹ್ಯಾರಿಸನ್, ಕಲ್ಪನಾ ಚಾವ್ಲಾಗೆ ಶ್ಲಾಘನೆ ವ್ಯಕ್ತಪಡಿಸಲು ಬಾಹ್ಯಾಕಾಶ ನೌಕೆಗೆ ಅವಳ ಹೆಸರು ಇಡಲಾಗಿದೆ. ವಿಶಾಲ ಅರ್ಥದಲ್ಲಿ ಭಾರತೀಯರು ಪ್ರಪಂಚದ ಅತ್ಯುತ್ತಮರನ್ನೂ ಸೋಲಿಸಬಹುದು ಮತ್ತು ಅದರಲ್ಲಿ ಯಶಸ್ಸು ಕಾಣಬಹುದು ಎಂದು ಜೀನ್ ಪೈರೆ ಹ್ಯಾರಿಸನ್ ಹೇಳಿದ್ದಾರೆ.
ಎಸ್‌ಎಸ್ ಕಲ್ಪನಾ ಚಾವ್ಲಾ ಎಂದು ಕರೆಯಲ್ಪಡುವ ಸಿಗ್ನಸ್ ಬಾಹ್ಯಾಕಾಶ ನೌಕೆಯನ್ನು ನಾಸಾ ವಾಣಿಜ್ಯ ಸರಕು ಪೂರೈಕೆದಾರ ನಾರ್ತ್ರೋಪ್ ಗ್ರಮ್ಮನ್‌ರ 14ನೇ ರೀಸಪ್ಲೆ ಮಿಷನ್ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸೇರಿಸಿದೆ.