ಕರ್ನಾಟಕ

karnataka

ETV Bharat / bharat

ಕಲ್ಪನಾ ಚಾವ್ಲಾ ಪುಣ್ಯಸ್ಮರಣೆ:''ಮರೆಯಾದ ನಕ್ಷತ್ರ''ಕ್ಕೆ ರಾಜಕೀಯ ಗಣ್ಯರ ಗೌರವ ವಂದನೆ - Tributes on twitter for kalpana chawla

ಭಾರತದ ಮೊದಲ ಮಹಿಳಾ ಗಗನಯಾತ್ರಿ ಕಲ್ಪನಾ ಚಾವ್ಲಾರ ಪುಣ್ಯಸ್ಮರಣೆ ಹಿನ್ನೆಲೆ ಅವರಿಗೆ ಅನೇಕ ರಾಜಕೀಯ ಗಣ್ಯರು ಟ್ವಿಟರ್​​​ನಲ್ಲಿ ಗೌರವ ಸಲ್ಲಿಸಿದ್ದಾರೆ.

kalpana-chawla-tributes-pour-in-for-indias-first-woman-in-space
ಕಲ್ಪನಾ ಚಾವ್ಲಾ ಪುಣ್ಯಸ್ಮರಣೆ

By

Published : Feb 1, 2020, 9:21 PM IST

ನವದೆಹಲಿ: ಭಾರತದ ಮೊದಲ ಮಹಿಳಾ ಗಗನಯಾತ್ರಿ ಕಲ್ಪನಾ ಚಾವ್ಲಾರ ಪುಣ್ಯಸ್ಮರಣೆ ಹಿನ್ನೆಲೆ ಅವರಿಗೆ ಅನೇಕ ರಾಜಕೀಯ ಗಣ್ಯರು ಟ್ವಿಟರ್​​​ನಲ್ಲಿ ಗೌರವ ಸಲ್ಲಿಸಿದ್ದಾರೆ.

ಜುಲೈ 1, 1961 ರಂದು ಹರಿಯಾಣದ ಕರ್ನಲ್​​ನಲ್ಲಿ ಜನಿಸಿದ ಚಾವ್ಲಾ 1997 ರಲ್ಲಿ ಮೊದಲ ಬಾರಿಗೆ ಬಾಹ್ಯಾಕಾಶ ತಲುಪಿದ ಮಹಿಳಾ ಗಗನಯಾತ್ರಿ ಹಾಗೂ ಗಗನಯಾತ್ರಿ ರಾಕೇಶ್ ಶರ್ಮಾ ನಂತರ ಬಾಹ್ಯಾಕಾಶದಲ್ಲಿ ಹಾರಾಟ ನಡೆಸಿದ ಎರಡನೇ ಭಾರತೀಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು.

ಕಲ್ಪನಾ ಚಾವ್ಲಾ ಪುಣ್ಯಸ್ಮರಣೆ

ಆದರೆ ಕಲ್ಪನಾ ಚಾವ್ಲಾ 2003 ರಲ್ಲಿ ಕೊಲಂಬಿಯಾ ಬಾಹ್ಯಾಕಾಶ ನೌಕೆ ಪತನಗೊಂಡು ದುರಂತ ಸಾವಿಗೀಡಾದರು. ಈ ಹಿನ್ನೆಲೆ ಇಂದು ಹಲವಾರು ರಾಜಕೀಯ ಮುಖಂಡರು ಸೇರಿದಂತೆ ಅನೇಕ ಭಾರತೀಯರು ತಮ್ಮ 'ಮರೆಯಾದ ನಕ್ಷತ್ರ’ಕ್ಕೆ ಟ್ವಿಟರ್‌ನಲ್ಲಿ ಗೌರವ ಸಲ್ಲಿಸಿದರು.

ಬಾಹ್ಯಾಕಾಶ ಯಾತ್ರೆ ನಡೆಸಿದ ಮೊದಲ ಭಾರತೀಯ ಮಹಿಳೆ ಕಲ್ಪನಾ ಚಾವ್ಲಾ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್​​ ಟ್ವಿಟರ್​​ನಲ್ಲಿ ಬರೆದುಕೊಂಡಿದ್ದಾರೆ. ಭಾರತದ ಹೆಮ್ಮೆಯ ಪುತ್ರಿ ಚಾವ್ಲಾ, ಇವರ ಸಾಧನೆಗಳು ಯುವಜನತೆಗೆ ಹಾಗೂ ಮುಂದಿನ ಪೀಳಿಗೆಗೆ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಸ್ಫೂರ್ತಿ ಎಂದಿದ್ದಾರೆ.

ಇನ್ನು ಹರಿಯಾಣ ಸಿಎಂ ಮನೋಹರ್​​ ಲಾಲ್​​ ಖಟ್ಟರ್​​ ಹರಿಯಾಣದ ಧೈರ್ಯಶಾಲಿ ಹೆಣ್ಣುಮಗಳು ಕಲ್ಪನಾ ಚಾವ್ಲಾ, ಬಾಹ್ಯಾಕಾಶ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ, ತ್ಯಾಗ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ ಎಂದು ಬರೆದುಕೊಂಡಿದ್ದಾರೆ.

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ “ಕಲ್ಪನಾ ಚಾವ್ಲಾ ಅವರ ಸ್ಮರಣೀಯ ಸಾಧನೆಗಾಗಿ ನನ್ನ ಗೌರವ, ಕಲ್ಪನಾ ಸಾಧನೆ ಮಹಿಳೆಯರು ತಮ್ಮ ಗುರಿಗಳನ್ನು ಉತ್ಸಾಹ ಮತ್ತು ಕಠಿಣ ಪರಿಶ್ರಮದೊಂದಿಗೆ ಈಡೇರಿಸಿಕೊಳ್ಳಲು ಪ್ರೇರೇಪಿಸುತ್ತದೆ ಎಂದು ತಿಳಿಸಿದ್ದಾರೆ.

ರಾಜಸ್ಥಾನ ಮಾಜಿ ಮುಖ್ಯಮಂತ್ರಿ ವಸುಂದರಾ ರಾಜೆ ನೀವು ಕನಸು ಕಾಣುವವರಾದರೆ, ಕನಸನ್ನ ಹಿಂಬಾಲಿಸಿ,ಕನಸಿಗೆ ಹೆಣ್ಣು -ಗಂಡು ಭೇದ ಭಾವವಿಲ್ಲ, ಅಥವಾ ನೀವು ಭಾರತದವರಾ ಅಥವಾ ಬೇರೆ ಕಡೆಯವರಾ ಅದು ಲೆಕ್ಕಕ್ಕಿಲ್ಲ ಎಂದು ಭಾರತದ ಮೊದಲ ಗಗನಯಾತ್ರಿ ಚಾವ್ಲಾರನ್ನು ಸ್ಮರಿಸಿಕೊಂಡಿದ್ದಾರೆ.

ABOUT THE AUTHOR

...view details