ಮಧ್ಯಪ್ರದೇಶ: ನೀವು ಮಾಂಸಾಹಾರಿಗಳಾಗಿದ್ದರೆ ಕಡಕ್ನಾಥ್ ಕೋಳಿಯ ಹೆಸರನ್ನು ಕೇಳಿರಲೇಬೇಕು. ಇದರ ಹೆಸರು ಕೇಳುತ್ತಿದ್ದಂತೆಯೇ ಅನೇಕ ಜನರ ಬಾಯಲ್ಲಿ ನೀರು ಬರುತ್ತದೆ. ಅಂದಹಾಗೆ ಇದರ ಮಾಂಸ ರುಚಿ ಎನ್ನುವುದೇ ಇದರ ವಿಶೇಷ ಎಂದಲ್ಲ. ವಿವಿಧ ಪೋಷಕಾಂಶಗಳಿಂದ ಕೂಡಿರುವ ಈ ಕೋಳಿಯ ಮಾಂಸವನ್ನ ಅಸ್ತಮಾ, ಮೂತ್ರಪಿಂಡ ಕಾಯಿಲೆ, ಕ್ಷಯ, ಹೃದಯ ಮತ್ತು ಮಧುಮೇಹ ಇತ್ಯಾದಿ ಕಾಯಿಲೆಗಳ ಔಷಧಿಗಳಲ್ಲಿ ಬಳಸಲಾಗುತ್ತದೆ.
ಕಪ್ಪು ಬಣ್ಣವೇ ಕಡಕ್ನಾಥ್ನ ವಿಶೇಷ ಗುರುತು:ಕಡಕ್ನಾಥ್ ಕೋಳಿಯ ಮೈಬಣ್ಣ ಮಾತ್ರ ಕಪ್ಪು ಅಂದುಕೊಂಡರೆ, ಅದರ ರಕ್ತವು ಕೂಡ ಕಪ್ಪು ಬಣ್ಣದ್ದಾಗಿದೆ. ಅದರ ಮಾಂಸದಲ್ಲಿ ಕಬ್ಬಿನಾಂಶವಿರುವುದು ಸಾಬೀತಾಗಿದ್ದು, ಬಂಜೆತನ ಹಾಗೂ ಮುಟ್ಟಿನ ಸಮಸ್ಯೆಗಳು ಸೇರಿದಂತೆ ಇತರ ಸ್ತ್ರೀರೋಗಗಳಿಗೆ ರಾಮಬಾಣವಾಗಿದೆ. ಅಲ್ಲದೇ ಹೆರಿಗೆಯ ಬಳಿಕ ಈ ಕೋಳಿಯ ಮೊಟ್ಟೆಗಳನ್ನು ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ.