ಚಂಡೀಗಢ:ಪಂಜಾಬ್ನಲ್ಲಿ ಭಾನುವಾರ ರಾತ್ರಿ 28 ವರ್ಷದ ಗುರ್ಮೇಜ್ ಎಂಬ ಕಬಡ್ಡಿ ಆಟಗಾರನನ್ನು ಗುಂಡಿಕ್ಕಿ ಕೊಂದ ಆರೋಪದ ಮೇಲೆ ಆರು ಜನರನ್ನು ಬಂಧಿಸಲಾಗಿದೆ. ಅಪರಾಧದ ಸಮಯದಲ್ಲಿ ಪೊಲೀಸರು ಕುಡಿದಿದ್ದರು ಎಂದು ಆರೋಪಿಸಲಾಗಿದೆ.
ಕಬಡ್ಡಿ ಆಟಗಾರನ ಕೊಲೆ ಪ್ರಕರಣ: ಐವರು ಪೊಲೀಸರು ಸೇರಿದಂತೆ 6 ಜನರ ಬಂಧನ - ಕಬಡ್ಡಿ ಆಟಗಾರನ ಕೊಲೆ ಪ್ರಕರಣ
ಆರೋಪಿಗಳನ್ನು ಅಮೃತಸರದ ಸಹಾಯಕ ಸಬ್ ಇನ್ಸ್ಪೆಕ್ಟರ್ಗಳಾದ ರಂಜಿತ್ ಸಿಂಗ್ ಮತ್ತು ಬಲ್ಜಿತ್ ಸಿಂಗ್ ಎಂದು ಗುರುತಿಸಲಾಗಿದೆ. ಮುಖ್ಯ ಕಾನ್ಸ್ಟೇಬಲ್ಗಳಾದ ಅವತಾರ್ ಸಿಂಗ್ ಮತ್ತು ಬಾಲ್ಕರ್ ಸಿಂಗ್, ಮುಖ್ಯಮಂತ್ರಿಗಳ ಭದ್ರತೆಗೆಂದು ನಿಯೋಜಿಸಲಾಗಿರುವ ಸುರಿಂದರ್ ಸಿಂಗ್ ಮತ್ತು ಸಿಮ್ರತ್ ಸಿಂಗ್ ಎಂದು ತಿಳಿದುಬಂದಿದೆ.
ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಚ್ಪಾಲ್ ಸಿಂಗ್ ಅವರು ಆರೋಪಿಗಳ ಬಂಧನದ ಬಗ್ಗೆ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. ಆರೋಪಿಗಳನ್ನು ಅಮೃತಸರದ ಸಹಾಯಕ ಸಬ್ ಇನ್ಸ್ಪೆಕ್ಟರ್ಗಳಾದ ರಂಜಿತ್ ಸಿಂಗ್ ಮತ್ತು ಬಲ್ಜಿತ್ ಸಿಂಗ್ ಎಂದು ಗುರುತಿಸಲಾಗಿದೆ. ಮುಖ್ಯ ಕಾನ್ಸ್ಟೇಬಲ್ಗಳಾದ ಅವತಾರ್ ಸಿಂಗ್ ಮತ್ತು ಬಾಲ್ಕರ್ ಸಿಂಗ್, ಮುಖ್ಯಮಂತ್ರಿಗಳ ಭದ್ರತೆಗೆಂದು ನಿಯೋಜಿಸಲಾಗಿರುವ ಸುರಿಂದರ್ ಸಿಂಗ್ ಮತ್ತು ಸಿಮ್ರತ್ ಸಿಂಗ್ ಎಂದು ತಿಳಿದುಬಂದಿದೆ.
ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 302 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, 28 ವರ್ಷದ ಗುರ್ಮೆಜ್ನನ್ನು ಕೊಂದ ಪೊಲೀಸರ ಗುರುತನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದರು.