ಕರ್ನಾಟಕ

karnataka

ETV Bharat / bharat

ಸಿಂಧಿಯಾ ತಮ್ಮ ಸಿದ್ಧಾಂತಗಳನ್ನು ತ್ಯಜಿಸಿ ಆರ್​ಎಸ್​ಎಸ್​ನೊಂದಿಗೆ ಹೋದರು: ರಾಹುಲ್​ ಗಾಂಧಿ - ಜ್ಯೋತಿರಾದಿತ್ಯ ಸಿಂಧಿಯಾ ಸುದ್ದಿ

ಇದು ಸಿದ್ಧಾಂತದ ಹೋರಾಟ, ಒಂದು ಕಡೆ ಕಾಂಗ್ರೆಸ್ ಮತ್ತೊಂದು ಕಡೆ ಬಿಜೆಪಿ-ಆರ್‌ಎಸ್‌ಎಸ್. ನನಗೆ ಸಿಂಧಿಯಾ ಅವರ ಸಿದ್ಧಾಂತದ ಬಗ್ಗೆ ತಿಳಿದಿದೆ. ಅವರು ನನ್ನೊಂದಿಗೆ ಕಾಲೇಜಿನಲ್ಲಿದ್ದರು. ನನಗೆ ಅವರ ಬಗ್ಗೆ ಚೆನ್ನಾಗಿ ತಿಳಿದಿದೆ. ಅವರು ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಚಿಂತೆ ಮಾಡಿ, ಸಿದ್ಧಾಂತವನ್ನು ತ್ಯಜಿಸಿ ಆರ್​ಎಸ್​ಎಸ್​ನೊಂದಿಗೆ ಹೋದರು ಎಂದು ರಾಹುಲ್​ ಪ್ರತಿಕ್ರಿಯೆ ನೀಡಿದ್ದಾರೆ ಎಂದು ರಾಹುಲ್​ ಗಾಂಧಿ ಹೇಳಿದ್ದಾರೆ.

Rahul Gandhi
ರಾಹುಲ್​ ಗಾಂಧಿ

By

Published : Mar 12, 2020, 6:46 PM IST

ನವದೆಹಲಿ: ನನಗೆ ಜ್ಯೋತಿರಾದಿತ್ಯ ಸಿಂಧಿಯಾ ಅವರ ಸಿದ್ಧಾಂತದ ಬಗ್ಗೆ ತಿಳಿದಿದೆ. ಅವರು ನನ್ನೊಂದಿಗೆ ಕಾಲೇಜಿನಲ್ಲಿದ್ದರು. ನನಗೆ ಅವರ ಬಗ್ಗೆ ಚೆನ್ನಾಗಿ ತಿಳಿದಿದೆ. ಅವರು ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಚಿಂತೆ ಮಾಡಿ, ಸಿದ್ಧಾಂತವನ್ನು ತ್ಯಜಿಸಿ ಆರ್​ಎಸ್​ಎಸ್​ನೊಂದಿಗೆ ಹೋದರು ಎಂದು ರಾಹುಲ್​ ಪ್ರತಿಕ್ರಿಯೆ ನೀಡಿದ್ದಾರೆ.

ಇದು ಸಿದ್ಧಾಂತದ ಹೋರಾಟ, ಒಂದು ಕಡೆ ಕಾಂಗ್ರೆಸ್ ಮತ್ತೊಂದು ಕಡೆ ಬಿಜೆಪಿ-ಆರ್‌ಎಸ್‌ಎಸ್. ವಾಸ್ತವವೆಂದರೆ ಜ್ಯೋತಿರಾದಿತ್ಯ ಸಿಂಧಿಯಾಗೆ ಬಿಜೆಪಿಯಲ್ಲಿ ಗೌರವ ಸಿಗುವುದಿಲ್ಲ. ಮತ್ತು ಅವರು ಅಲ್ಲಿ ತೃಪ್ತರಲ್ಲ. ಇದನ್ನು ಅವರು ಮುಂದೆ ಅರಿತುಕೊಳ್ಳುತ್ತಾರೆ. ಏಕೆಂದರೆ ನಾನು ಅವರೊಂದಿಗೆ ದೀರ್ಘಕಾಲ ಸ್ನೇಹಿತನಾಗಿದ್ದೆ. ಅವರ ಹೃದಯದಲ್ಲಿರುವುದು ಮತ್ತು ಅವರ ಬಾಯಿಂದ ಹೊರಬರುತ್ತಿರುವುದು ವಿಭಿನ್ನವಾಗಿದೆ.

ತಮ್ಮ ಪ್ರಮುಖ ತಂಡದ ಸದಸ್ಯರನ್ನು ರಾಜ್ಯಸಭೆಗೆ ಏಕೆ ಕಳುಹಿಸುತ್ತಿಲ್ಲ ಎಂಬ ಪ್ರಶ್ನೆಗೆ, ನಾನು ಕಾಂಗ್ರೆಸ್ ಅಧ್ಯಕ್ಷನಲ್ಲ. ರಾಜ್ಯಸಭಾ​​ ನಾಮನಿರ್ದೇಶಿತರ ಬಗ್ಗೆ ನಾನು ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ನಾನು ದೇಶದ ಯುವಕರಿಗೆ ಆರ್ಥಿಕತೆಯ ಬಗ್ಗೆ ಮಾಹಿತಿ ನೀಡುತ್ತಿದ್ದೇನೆ. ನನ್ನ ತಂಡದಲ್ಲಿ ಇರುವವರಿಗೆ, ನನ್ನ ತಂಡದಲ್ಲಿ ಇಲ್ಲದವರು ಯಾವುದೇ ಪರಿಣಾಮಗಳನ್ನು ಬೀರುವುದಿಲ್ಲ ಎಂದು ರಾಹುಲ್​ ಹೇಳಿದ್ದಾರೆ.

ABOUT THE AUTHOR

...view details