ಜೋಧ್ಪುರ್ (ರಾಜಸ್ಥಾನ): ಹೈದರಾಬಾದ್ ಪಶುವೈದ್ಯೆ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳ ಎನ್ಕೌಂಟರ್ ಕುರಿತು ಮಾತನಾಡಿರುವ ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬಾಬ್ಡೆ, ನ್ಯಾಯವು ಎಂದಿಗೂ ಸೇಡಿನ ರೂಪದಲ್ಲಿರಬಾರದು ಎಂದು ಹೇಳಿದರು.
ನ್ಯಾಯವು ಎಂದಿಗೂ ಸೇಡಿನ ರೂಪದಲ್ಲಿರಬಾರದು: ಸಿಜೆಐ
ಅಪರಾಧ ನ್ಯಾಯ ವ್ಯವಸ್ಥೆಯು ತನ್ನ ನಿಲುವು ಮತ್ತು ಮನೋಭಾವವನ್ನು ಮರು ಪರಿಶೀಲಿಸಬೇಕು. ನ್ಯಾಯವು ಎಂದಿಗೂ ಸೇಡು ತೀರಿಸಿಕೊಳ್ಳುವಂತಿರಬಾರದು. ಅದು ಪ್ರತೀಕಾರವಾದರೆ ನ್ಯಾಯವು ತನ್ನ ನ್ಯಾಯದ ಪಾತ್ರವನ್ನು ಕಳೆದುಕೊಳ್ಳುತ್ತದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬಾಬ್ಡೆ ತಿಳಿಸಿದರು.
ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ದೇಶದಲ್ಲಿ ನಡೆಯುತ್ತಿರುವ ಇತ್ತೀಚಿನ ಘಟನೆಗಳು ಹಳೆಯ ಚರ್ಚೆಯನ್ನು ಹೊಸ ಹುರುಪಿನಿಂದ ಹುಟ್ಟುಹಾಕುತ್ತಿವೆ. ಅಪರಾಧ ನ್ಯಾಯ ವ್ಯವಸ್ಥೆಯು ತನ್ನ ನಿಲುವು ಮತ್ತು ಮನೋಭಾವವನ್ನು ಮರುಪರಿಶೀಲಿಸಬೇಕು. ನ್ಯಾಯವು ಎಂದಿಗೂ ಸೇಡು ತೀರಿಸಿಕೊಳ್ಳುವಂತಿರಬಾರದು. ಅದು ಪ್ರತೀಕಾರವಾದರೆ ನ್ಯಾಯವು ತನ್ನ ನ್ಯಾಯದ ಪಾತ್ರವನ್ನು ಕಳೆದುಕೊಳ್ಳುತ್ತದೆ ಎಂದು ಅವರು ತಿಳಿಸಿದರು.
ಶುಕ್ರವಾರ ಬೆಳಗ್ಗೆ ಹೈದರಾಬಾದ್ನ ಚತನ್‌ಪಲ್ಲಿಯಲ್ಲಿ ತೆಲಂಗಾಣ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಪಶುವೈದ್ಯೆಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಿದ ನಾಲ್ವರು ಆರೋಪಿಗಳನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿತ್ತು.