ಕರ್ನಾಟಕ

karnataka

By

Published : Jan 7, 2021, 1:36 PM IST

Updated : Jan 7, 2021, 1:43 PM IST

ETV Bharat / bharat

ತೆಲಂಗಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಹಿಮಾ ಕೊಹ್ಲಿ ಪ್ರಮಾಣ ಸ್ವೀಕಾರ

ಹಿಮಾ ಕೊಹ್ಲಿ ಈವರೆಗೆ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದು, ಪ್ರಸ್ತುತ ತೆಲಂಗಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ. ದೇಶಾದ್ಯಂತದ ಹೈಕೋರ್ಟ್‌ಗಳ ಪೈಕಿ ಇವರು ಏಕೈಕ ಮಹಿಳಾ ಮುಖ್ಯ ನ್ಯಾಯಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Justice Hima Kohli
ನ್ಯಾಯಾಧೀಶೆ ಹಿಮಾ ಕೊಹ್ಲಿ

ಹೈದರಾಬಾದ್​​: ತೆಲಂಗಾಣ ಹೈಕೋರ್ಟ್‌ನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ಹಿಮಾ ಕೊಹ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ರಾಜ ಭವನದಲ್ಲಿ ರಾಜ್ಯಪಾಲ ತಮಿಳ್ ​​ಸಾಯಿ ಸೌಂದರಾಜನ್, ಮುಖ್ಯಮಂತ್ರಿ ಕೆ.ಸಿ.ಆರ್ ಮತ್ತು ಇತರೆ ಗಣ್ಯರ ಸಮ್ಮುಖದಲ್ಲಿ ಹಿಮಾ ಕೊಹ್ಲಿ ಅವರು ತೆಲಂಗಾಣ ಹೈಕೋರ್ಟ್‌ನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ತೆಲಂಗಾಣ ಹೈಕೋರ್ಟ್ ನ್ಯಾಯಾಧೀಶೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿಮಾ ಕೊಹ್ಲಿ

ಹಿಮಾ ಕೊಹ್ಲಿ ಈವರೆಗೆ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದು, ಪ್ರಸ್ತುತ ತೆಲಂಗಾಣ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದಾರೆ. ದೇಶಾದ್ಯಂತ ಹೈಕೋರ್ಟ್‌ಗಳ ಪೈಕಿ ಏಕೈಕ ಮಹಿಳಾ ಮುಖ್ಯ ನ್ಯಾಯಮೂರ್ತಿ ಎಂಬ ಹೆಗ್ಗಳಿಕೆಗೆ ಹಿಮಾ ಕೊಹ್ಲಿ ಪಾತ್ರರಾಗಿದ್ದಾರೆ.

ಈ ಸುದ್ದಿಯನ್ನೂ ಓದಿ:ಅಮಿತಾಬ್ ಬಚ್ಚನ್ ಧ್ವನಿಯಲ್ಲಿನ ಕೋವಿಡ್-19​ ಕಾಲರ್ ಟ್ಯೂನ್ ತೆರೆವಿಗೆ ಪಿಐಎಲ್ ಸಲ್ಲಿಕೆ

ಹಿಮಾ ಕೊಹ್ಲಿ 1959ರ ಸೆಪ್ಟೆಂಬರ್ 2 ರಂದು ದೆಹಲಿಯಲ್ಲಿ ಜನಿಸಿದ್ದು, ದೆಹಲಿ ವಿಶ್ವವಿದ್ಯಾಲಯದಲ್ಲಿ ಕಾನೂನು ವಿದ್ಯಾಭ್ಯಾಸ ಮಾಡಿದ್ದಾರೆ. 1984ರಲ್ಲಿ ಕಾನೂನು ವೃತ್ತಿ ಆರಂಭಿಸಿ, 2006 ರಿಂದ ದೆಹಲಿ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿರಾಗಿದ್ದಾರೆ. ಇದೀಗ ಮುಖ್ಯ ನ್ಯಾಯಾಧೀಶೆಯಾಗಿ ತೆಲಂಗಾಣಕ್ಕೆ ವರ್ಗಾಯಿಸಲಾಗಿದೆ. ಹೊಸ ಸಿಜೆ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆ, ರಾಜ ಭವನದ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಸಂಚಾರ ನಿರ್ಬಂಧ ಹೇರಲಾಗಿತ್ತು.

Last Updated : Jan 7, 2021, 1:43 PM IST

ABOUT THE AUTHOR

...view details