ನವದೆಹಲಿ: ಲೋಕಪಾಲ್ ಸದಸ್ಯ, ನ್ಯಾಯಮೂರ್ತಿ (ನಿವೃತ್ತ) ಎ.ಕೆ. ತ್ರಿಪಾಠಿ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ. 62 ವರ್ಷದ ತ್ರಿಪಾಠಿ ಅವರು ದೆಹಲಿಯ ಏಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಕೊರೊನಾ ವೈರಸ್ನಿಂದ ಬಳಲುತ್ತಿದ್ದ ಲೋಕಪಾಲ್ ಸದಸ್ಯ ನ್ಯಾ. ಎ.ಕೆ. ತ್ರಿಪಾಠಿ ನಿಧನ - ನಿಧನ
ಛತ್ತೀಸಗಢ ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಎ.ಕೆ. ತ್ರಿಪಾಠಿ, ಕೊರೊನಾ ಸೋಂಕಿನ ಕಾರಣದಿಂದ ದೆಹಲಿಯ ಏಮ್ಸ್ನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ಸ್ಥಿತಿ ತೀರಾ ಗಂಭೀರವಾದ ಹಿನ್ನೆಲೆಯಲ್ಲಿ ಅವರಿಗೆ ವೆಂಟಿಲೇಟರ್ ಅಳವಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ರಾತ್ರಿ 8.45 ರ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ.
Justice AK Tripathi
ಛತ್ತೀಸಗಢ ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಎ.ಕೆ. ತ್ರಿಪಾಠಿ, ಕೊರೊನಾ ಸೋಂಕಿನ ಕಾರಣದಿಂದ ದೆಹಲಿಯ ಏಮ್ಸ್ನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ಸ್ಥಿತಿ ತೀರಾ ಗಂಭೀರವಾದ ಹಿನ್ನೆಲೆಯಲ್ಲಿ ಅವರಿಗೆ ವೆಂಟಿಲೇಟರ್ ಅಳವಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ರಾತ್ರಿ 8.45 ರ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ. ನ್ಯಾಯಮೂರ್ತಿ ತ್ರಿಪಾಠಿ ಲೋಕಪಾಲ್ ಮಂಡಳಿಯ ಸದಸ್ಯರೂ ಆಗಿದ್ದರು.
ಕೊರೊನಾ ವೈರಸ್ ಸೋಂಕಿತರಾಗಿದ್ದ ತ್ರಿಪಾಠಿಯವರ ಮಗಳು ಹಾಗೂ ಮನೆಕೆಲಸದ ಸಿಬ್ಬಂದಿಯೊಬ್ಬ ಸೋಂಕಿನಿಂದ ಗುಣಮುಖರಾಗಿದ್ದಾರೆ.
Last Updated : May 3, 2020, 12:33 AM IST