ಕರ್ನಾಟಕ

karnataka

ETV Bharat / bharat

ನನ್ನ ಸ್ನೇಹಿತನೊಂದಿಗೆ ಗ್ರೇಟ್​ ಮೀಟಿಂಗ್​​: ಫೋಟೋ ಟ್ವೀಟ್​ ಮಾಡಿದ ಟ್ರಂಪ್​! - ಡೊನಾಲ್ಡ್​ ಟ್ರಂಪ್​

ಫ್ರಾನ್ಸ್​​ನಲ್ಲಿ ನಡೆಯುತ್ತಿರುವ ಜಿ-7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​​ ಮಾತುಕತೆ ನಡೆಸಿದರು. ಇದೇ ವಿಷಯವನ್ನು ಟ್ರಂಪ್​ ಟ್ವೀಟ್​ ಮಾಡಿದ್ದಾರೆ.

ಮೋದಿ-ಟ್ರಂಪ್​ ಮಾತುಕತೆ

By

Published : Aug 26, 2019, 6:54 PM IST

ಫ್ರಾನ್ಸ್​​​:ಇಲ್ಲಿನ ಬಿಯಾರಿಟ್ಸ್​​ನಲ್ಲಿ ನಡೆಯುತ್ತಿರುವ ಜಿ-7 ಶೃಂಗಸಭೆಯಲ್ಲಿ ಅಮೆರಿಕ, ಫ್ರಾನ್ಸ್​,ಭಾರತ ಸೇರಿದಂತೆ ಏಳು ರಾಷ್ಟ್ರಗಳು ಭಾಗಿಯಾಗಿದ್ದು, ಮಹತ್ವದ ಮಾತುಕತೆ ನಡೆಸುತ್ತಿವೆ. ಇದರ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷರೊಂದಿಗೆ ಜಮ್ಮು-ಕಾಶ್ಮೀರ ವಿಚಾರವಾಗಿ ಚರ್ಚೆ ನಡೆಸಿದರು.

ಮೋದಿ-ಟ್ರಂಪ್​ ಮಾತುಕತೆ

ಇದಾದ ಬಳಿಕ ಉಭಯ ದೇಶದ ನಾಯಕರು ಸುದ್ದಿಗೋಷ್ಠಿಯಲ್ಲಿ ಭಾಗಿಯಾದರು. ಇದೇ ವಿಷಯವನ್ನ ಅಮೆರಿಕದ ಅಧ್ಯಕ್ಷ ತಮ್ಮ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ನನ್ನ ಗೆಳೆಯ ಪ್ರಧಾನಿ ನರೇಂದ್ರ ಮೋದಿ ಜತೆಗೆ ಜಿ-7 ಶೃಂಗಸಭೆಯಲ್ಲಿ ಗ್ರೇಟ್​ ಮೀಟಿಂಗ್​ ನಡೆಸಿದೆ ಎಂದು ಕೆಲ ಫೋಟೋ ಹಾಕಿ ಟ್ವೀಟ್​ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ನಾನು ಭರವಸೆ ನೀಡುತ್ತೇನೆ, ಭಾರತ ಮತ್ತು ಪಾಕ್​ ಖುದ್ದಾಗಿ ಈ ಸಮಸ್ಯೆ ಬಗೆಹರಿಸಿಕೊಳ್ಳಲಿದೆ ಎಂದು ದ್ವಿಪಕ್ಷೀಯ ಮಾತುಕತೆ ವೇಳೆ ಡೋನಾಲ್ಡ್​ ಟ್ರಂಪ್​ ಅವರಿಗೆ ಮೋದಿ ಭರವಸೆ ನೀಡಿದ್ದರು. ಕಾಶ್ಮೀರ ದ್ವಿಪಕ್ಷೀಯ ವಿಷಯವಾಗಿದ್ದು, ಮೂರನೇ ರಾಷ್ಟ್ರದ ಮಧ್ಯಸ್ಥಿಕೆಗೆ ಆಹ್ವಾನಿಸಿ, ಆ ದೇಶವನ್ನ ತೊಂದರೆ ಈಡು ಮಾಡುವುದು ನಮಗೆ ಇಷ್ಟ ಎಂದು ಪ್ರಧಾನಿ ಟ್ರಂಪ್​​ ಅವರಿಗೆ ನಯವಾಗಿಯೇ ಹೇಳುವ ಮೂಲಕ ಸಂಧಾನಜಕಾರರ ಅವಶ್ಯಕತೆ ಇಲ್ಲ ಎನ್ನುವುದನ್ನ ಸ್ಪಷ್ಟಪಡಿಸಿದ್ದಾರೆ.

ಜಿ-7 ಶೃಂಗದಲ್ಲಿ ಟ್ರಂಪ್​​ ಕಾಶ್ಮೀರದ ಮಾತು... ನಮ್ಮಿಬ್ಬರ ಸಮಸ್ಯೆ ನಾವೇ ಬಗೆಹರಿಸಿಕೊಳ್ತೇವಿ ಎಂದ ಮೋದಿ

ಇದೇ ವೇಳೆ ಪ್ರಧಾನಿ ಮೋದಿ ಅದ್ಭುತವಾಗಿ ಇಂಗ್ಲಿಷ್ ಮಾತನಾಡುತ್ತಾರೆ. ದ್ಯಾಟ್ಸ್​​ ಇಟ್​​... ಆ ಬಗ್ಗೆ ಹೆಚ್ಚಿನ ಚರ್ಚೆ ಅಗತ್ಯ ಇಲ್ಲ ಎನ್ನುವ ಮೂಲಕ, ಮೋದಿ ಅವರೊಬ್ಬರು ನನಗೆ ಉತ್ತಮ ಗೆಳೆಯ ಎಂದು ಟ್ರಂಪ್​ ಹೇಳಿಕೊಂಡಿದ್ದಾರೆ.

ABOUT THE AUTHOR

...view details