ಕರ್ನಾಟಕ

karnataka

ETV Bharat / bharat

ಸಾವರ್ಕರ್​ ಹೇಳಿಕೆ: ಹೆಸರಲ್ಲಿ 'ಗಾಂಧಿ' ಇರುವ ಮಾತ್ರಕ್ಕೆ ರಾಹುಲ್​, ಗಾಂಧಿ ಆಗಲ್ಲ ಎಂದ ಫಡ್ನವೀಸ್ - ರಾಹುಲ್​​ ಗಾಂಧಿಗೆ ಫಡ್ನವೀಸ್​ ಟಾಂಗ್​

"ರಾಹುಲ್​ ಗಾಂಧಿಯವರ ಹೇಳಿಕೆ ನಿಜಕ್ಕೂ ನಾಚಿಕೆಗೇಡು. ಬಹುಷಃ ಅವರಿಗೆ ಸಾವರ್ಕರ್​ ಬಗ್ಗೆ ತಿಳಿದಿಲ್ಲ ಅನಿಸುತ್ತೆ. ಸಾವರ್ಕರ್ ಅವರು ಅಂಡಮಾನ್​ ಜೈಲಿನಲ್ಲಿ 12 ವರ್ಷಗಳ ಕಾಲ ಶಿಕ್ಷೆ ಅನುಭವಿಸಿದವರು. ಆದರೆ ರಾಹುಲ್​ ಗಾಂಧಿಯವರಿಂದ ಕೇವಲ 12 ಗಂಟೆಗಳವರೆಗೂ ಜೈಲಿನಲ್ಲಿರಲು ಸಾಧ್ಯವಿಲ್ಲ. ಹೆಸರಿನಲ್ಲಿ ಮಾತ್ರ ಗಾಂಧಿ ಇದ್ದ ಮಾತ್ರಕ್ಕೆ ನೀವು ಗಾಂಧಿಯಾಗಲು ಸಾಧ್ಯವಿಲ್ಲ", ದೇವೇಂದ್ರ ಫಡ್ನವೀಸ್​.

ರಾಗಾಗೆ ಫಡ್ನವೀಸ್​ ಟಾಂಗ್​ Devendra Fadnavis,
ರಾಗಾಗೆ ಫಡ್ನವೀಸ್​ ಟಾಂಗ್​

By

Published : Dec 15, 2019, 9:56 AM IST

ನವದೆಹಲಿ:ರಾಹುಲ್​ ಗಾಂಧಿಯವರ "ನನ್ನ ಹೆಸರು ರಾಹುಲ್​ ಸಾವರ್ಕರ್​ ಅಲ್ಲ, ರಾಹುಲ್​ ಗಾಂಧಿ" ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​, ರಾಗಾಗೆ ಟಾಂಗ್​ ಕೊಟ್ಟಿದ್ದಾರೆ.

ರಾಹುಲ್​ ಗಾಂಧಿಯವರ ಹೇಳಿಕೆ ನಿಜಕ್ಕೂ ನಾಚಿಕೆಗೇಡು. ಬಹುಷಃ ಅವರಿಗೆ ಸಾವರ್ಕರ್​ ಬಗ್ಗೆ ತಿಳಿದಿರುವ ಹಾಗಿಲ್ಲ. ಅವರು ಅಂಡಮಾನ್​ ಜೈಲಿನಲ್ಲಿ 12 ವರ್ಷಗಳ ಕಾಲ ಶಿಕ್ಷೆ ಅನುಭವಿಸಿದವರು. ಆದರೆ ರಾಹುಲ್​ ಗಾಂಧಿಯವರಿಂದ ಕೇವಲ 12 ಗಂಟೆಗಳವರೆಗೂ ಜೈಲಲ್ಲಿರಲು ಸಾಧ್ಯವಿಲ್ಲ. ಹೆಸರಿನಲ್ಲಿ ಮಾತ್ರ ಗಾಂಧಿ ಇದ್ದ ಮಾತ್ರಕ್ಕೆ ನೀವು ಗಾಂಧಿಯಾಗಲು ಸಾಧ್ಯವಿಲ್ಲ ಎಂದು ರಾಹುಲ್​ ಗಾಂಧಿಗೆ ಟೀಕಿಸಿದ್ದಾರೆ.

ಕೆಲ ದಿನಗಳ ಹಿಂದೆ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡುತ್ತಾ, ರಾಹುಲ್​ ಗಾಂಧಿ 'ರೇಪ್​ ಇನ್​ ಇಂಡಿಯಾ' ಎಂದು ಹೇಳಿಕೆ ನೀಡಿದ್ದರು. ಹೀಗಾಗಿ ರಾಹುಲ್​ ಗಾಂಧಿ ಕ್ಷಮೆ ಕೇಳಬೇಕು ಎಂದು ಬಿಜೆಪಿ ನಾಯಕರು ಹೇಳಿದ್ದರು.

ಹೀಗಾಗಿ ನಿನ್ನೆ ದೆಹಲಿಯಲ್ಲಿ ನಡೆದ 'ಭಾರತ್ ಬಚಾವೊ' ರ‍್ಯಾಲಿಯಲ್ಲಿ, ತಮ್ಮ 'ರೇಪ್​ ಇನ್​ ಇಂಡಿಯಾ' ಹೇಳಿಕೆಗೆ ಕ್ಷಮೆಯಾಚಿಬೇಕು ಎಂದು ಪಟ್ಟುಬಿದ್ದಿರುವ ಬಿಜೆಪಿಗೆ ರಾಗಾ ತಿರುಗೇಟು ನೀಡಿದ್ದರು. ನನ್ನ ಹೆಸರು ರಾಹುಲ್​ ಗಾಂಧಿ, ರಾಹುಲ್​ ಸಾವರ್ಕರ್​ ಅಲ್ಲ. ಸತ್ಯ ಮಾತನಾಡಿರುವುದಕ್ಕಾಗಿ ನಾನು ಎಂದಿಗೂ ಕ್ಷಮೆಯಾಚಿಸುವುದಿಲ್ಲ. ದೇಶದ ಆರ್ಥಿಕತೆಯನ್ನು ನಾಶಪಡಿಸಿದ್ದಕ್ಕಾಗಿ ಪ್ರಧಾನಿ ಮೋದಿ ಹಾಗೂ ಅವರ ಸಹಾಯಕ ಅಮಿತ್​ ಶಾ ಕ್ಷಮೆಯಾಚಿಸಬೇಕು ಎಂದು ಹೇಳಿದ್ದರು.

ABOUT THE AUTHOR

...view details