ಜೈಪುರ (ರಾಜಸ್ಥಾನ): ನ್ಯಾಯಾಲಯದಲ್ಲಿ ನ್ಯಾಯಧೀಶರನ್ನು ಉದ್ದೇಶಿಸಿ ಬಳಸುವ 'ಮೈ ಲಾರ್ಡ್' ಮತ್ತು 'ಯುವರ್ ಹಾನರ್' ಎಂಬ ಗೌರವ ನೀಡುವ ಪದಗಳಿಗೆ ರಾಜಸ್ಥಾನ ಹೈಕೋರ್ಟ್ ನಿಷೇಧಿಸಿದೆ. ಇನ್ನು ಮುಂದೆ ಈ ರೀತಿ ಸಂಭೋದಿಸಬಾರದು ಎಂಬ ತೀರ್ಮಾನ ಕೈಗೊಳ್ಳಲಾಗಿದೆ.
ಭಾರತೀಯ ನ್ಯಾಯಾಂಗ ವ್ಯವಸ್ಥೆಯು ಅಳವಡಿಸಿಕೊಂಡಿರುವ ಇಂತಹ ಬ್ರಿಟಿಷ್ ಸಂಪ್ರದಾಯಕ್ಕೆ ಕಡಿವಾಣ ಹಾಕಲು ಈ ರೀತಿ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ಹೊಸ ಅಧ್ಯಯನಕ್ಕೆ ನಾಂದಿ ಹಾಡಲು ಮುಂದಾಗಿದೆ.