ಕರ್ನಾಟಕ

karnataka

ETV Bharat / bharat

ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾಗೆ ಕೊರೊನಾ ಸೋಂಕು..! - jp nadda health condition

jp nadda
ಜೆ.ಪಿ.ನಡ್ಡಾ

By

Published : Dec 13, 2020, 5:50 PM IST

Updated : Dec 13, 2020, 6:13 PM IST

17:45 December 13

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾಗೆ ಕೊರೊನಾ ಸೋಂಕು ವಕ್ಕರಿಸಿದೆ. ವೈದ್ಯರ ಸಲಹೆಯ ಮೇರೆಗೆ ಅವರು ಮನೆಯಲ್ಲೇ ಐಸೋಲೇಷನ್​ಗೆ ಒಳಪಟ್ಟಿದ್ದು, ತಮ್ಮ ಆರೋಗ್ಯ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ.

ನವದೆಹಲಿ: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಕುರಿತು ಸ್ವತಃ ಜೆ.ಪಿ. ನಡ್ಡಾ ಟ್ವೀಟ್ ಮಾಡಿದ್ದು, ರೋಗ ಲಕ್ಷಣಗಳಿದ್ದ ಕಾರಣದ ಪರೀಕ್ಷೆ ಮಾಡಿಸಿದ್ದು, ಸೋಂಕು ದೃಢಪಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ:ಫೈಜರ್​ ಲಸಿಕೆ: ಸೋಮವಾರದಿಂದ ಅಮೆರಿಕದ ಎಲ್ಲ ರಾಜ್ಯಗಳಿಗೆ ಹಂಚಿಕೆ

ಇದರ ಜೊತೆಗೆ ವೈದ್ಯರ ಸಲಹೆಯ ಮೇರೆಗೆ ಮನೆಯಲ್ಲೇ ಐಸೋಲೇಷನ್​ಗೆ ಒಳಪಟ್ಟಿದ್ದು, ನನ್ನ ಆರೋಗ್ಯ ಉತ್ತಮವಾಗಿದೆ. ಕೆಲವು ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದಿದ್ದವರು ಸೋಂಕು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಟ್ವಿಟರ್​ನಲ್ಲಿ ಮನವಿ ಮಾಡಿದ್ದಾರೆ.

Last Updated : Dec 13, 2020, 6:13 PM IST

ABOUT THE AUTHOR

...view details