ಬಲ್ಲಿಯಾ (ಉತ್ತರ ಪ್ರದೇಶ): ಹಳೇ ದ್ವೇಷದ ಹಿನ್ನೆಲೆ ಪತ್ರಕರ್ತನೊಬ್ಬನನ್ನು ಗುಂಡಿಕ್ಕಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಫೆಫ್ನಾ ಎಂಬಲ್ಲಿ ನಡೆದಿದೆ.
ರತನ್ ಸಿಂಗ್ ಎಂಬುವರೆ ಮೃತ ಪತ್ರಕರ್ತ. ಗ್ರಾಮದ ಮುಖ್ಯಸ್ಥರ ನಿವಾಸದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದ್ದು, ಹಳೇ ದ್ವೇಷವೇ ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಗ್ರಾಮದ ಮುಖ್ಯಸ್ಥ ಜಾಬರ್ ಸಿಂಗ್ ಪಿತೂರಿ ನಡೆಸಿ ತನ್ನ ಮಗನನ್ನು ಕೊಲ್ಲಿಸಿದ್ದಾರೆ ಎಂದು ಮೃತ ಪತ್ರಕರ್ತನ ತಂದೆ ವಿನೋದ್ ಸಿಂಗ್ ಆರೋಪಿಸಿದ್ದಾರೆ.
ಜಾಬರ್ ಸಿಂಗ್ ಅವರ ಸಹೋದರ ಸೋನು ಹಾಗೂ ನನ್ನ ಮಗನ ನಡುವೆ ಜಗಳ ನಡೆದ ಬಗ್ಗೆ ನಮಗೆ ಮಾಹಿತಿ ಸಿಕ್ಕಿತು. ಆದರೆ ನಾನು ಸ್ಥಳಕ್ಕೆ ತೆರಳಿ ನೋಡಿದರೆ ನನ್ನ ಮಗನ ಕೊಲೆಯಾಗಿರುವುದು ಕಂಡುಬಂದಿದೆ. ಮೂರು ವರ್ಷಗಳ ಹಿಂದೆ ಅವರು ನನ್ನ ಹಿರಿಯ ಮಗನನ್ನೂ ಕೊಂದಿದ್ದರು ವಿನೋದ್ ಸಿಂಗ್ ಆರೋಪ ಮಾಡಿದ್ದಾರೆ.
ಘಟನೆಗೆ ಹಳೇ ದ್ವೇಷವೇ ಕಾರಣ ಎಂಬ ಮಾಹಿತಿ ಇದೆ. ತನಿಖೆ ನಡೆಸಲಾಗುತ್ತಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗವುದು ಎಂದು ಎಸ್ಪಿ ದೇವೇಂದ್ರನಾಥ್ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.