ಜೋಧ್ಪುರ (ರಾಜಸ್ಥಾನ):ಹಲವು ದಿನಗಳ ಹಿಂದೆ ರಾಜಸ್ಥಾನದ ಜೋಧ್ಪುರದ ದೀಪಕ್ ಎಂಬ ಯುವಕ ವೇದಿಕೆಯ ಮೇಲೆ ಡ್ಯಾನ್ಸ್ ಮಾಡುವ ಸಲುವಾಗಿ ಮಹಿಳೆಯ ಉಡುಗೆ ತೊಟ್ಟಿದ್ದ. ಇದೀಗ ಆತ ದೀಪಿಕಾ ಆಗಿ ಬದಲಾಗಿದ್ದಾನೆ.
ದೀಪಿಕಾ ಆಗಿ ಬದಲಾದ ದೀಪಕ್ ಪುರುಷನಾಗಿ ಜನಿಸಿದರೂ ಆತ ಯಾವಾಗಲೂ ತನ್ನನ್ನು ತಾನು ಮಹಿಳೆ ಎಂದು ಪರಿಗಣಿಸುತ್ತಿದ್ದ. ಮೂರು ತಿಂಗಳ ಹಿಂದೆ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಲಿಂಗ ಬದಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ.
ದೀಪಿಕಾ ಆಗಿ ಬದಲಾದ ದೀಪಕ್ ಒಂದೇ ವರ್ಷದಲ್ಲಿ ದೀಪಕ್ ನರ್ತಕಿ ಎಂಬ ಹೆಸರಿನಿಂದ ಜೋಧಪುರದಲ್ಲಿ ಅತ್ಯಂತ ಫೇಮಸ್ ಡ್ಯಾನ್ಸರ್ ಆಗಿ ಪ್ರಾಮುಖ್ಯತೆಯನ್ನು ಪಡೆದಿದ್ದಳು. ಅವಳು ಚಿಕ್ಕವಳಿದ್ದಾಗಿನಿಂದಲೂ ಹುಡುಗಿಯರ ಬಟ್ಟೆ ಧರಿಸುವುದನ್ನು ಇಷ್ಟಪಡುತ್ತಿದ್ದಳು. ಏಕೆಂದರೆ ಅವಳು ಯಾವಾಗಲೂ ಒಳಗಿನಿಂದ ಮಹಿಳೆ ಎಂದು ಭಾವಿಸುತ್ತಿದ್ದಳು.
ದೀಪಿಕಾ ಆಗಿ ಬದಲಾದ ದೀಪಕ್ ತನ್ನ ಹೋರಾಟವನ್ನು ನೆನಪಿಸಿಕೊಂಡ ದೀಪಿಕಾ, ತಂದೆಯ ಅನಾರೋಗ್ಯದ ಕಾರಣದಿಂದಾಗಿ ಆಕೆ ಏಳನೇ ತರಗತಿಯವರೆಗೆ ಮಾತ್ರ ಅಧ್ಯಯನ ಮಾಡಿದಳು. ಆಕೆಯ ತಂದೆ ತೀರಿಕೊಂಡ ನಂತರ, ಕುಟುಂಬವು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಬಳಿಕ 'ದೀಪಕ್' ಸ್ಥಳೀಯ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಲು ಪ್ರಾರಂಭಿಸಿದರು. ಇದರಿಂದ ಬಂದ ಹಣದಲ್ಲಿ ಕುಟುಂಬವನ್ನು ನಿಭಾಯಿಸುತ್ತಿದ್ದರು. ಅಲ್ಲದೇ ಅವರ ಕುಟುಂಬವೂ ಲಿಂಗ ಬದಲಾವಣೆ ನಿರ್ಧಾರಕ್ಕೆ ಬೆಂಬಲ ನೀಡಿದ್ರು ಎಂದು ದೀಪಿಕಾ ಹೇಳಿದ್ದಾರೆ.
ದೀಪಿಕಾ ಆಗಿ ಬದಲಾದ ದೀಪಕ್ ಕಳೆದ 10 ವರ್ಷಗಳಿಂದ ಜೋಧಪುರ ಮತ್ತು ಸುತ್ತಮುತ್ತ ಆಯೋಜಿಸುವ ಕಾರ್ಯಕ್ರಮಗಳಲ್ಲಿ ದೀಪಿಕಾ ಪ್ರದರ್ಶನ ನೀಡುತ್ತಿದ್ದಾರೆ. ಅವರ ನೃತ್ಯಕ್ಕೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಜೋಧಪುರದ ಜನರು ಕಾರ್ಯಕ್ರಮಗಳಲ್ಲಿ ನರ್ತಿಸಲು ಅವಕಾಶ ನೀಡಿದ್ದಕ್ಕೆ ಅವರಿಗೆ ಕೃತಜ್ಞತೆಯನ್ನ ಸಲ್ಲಿಸಿದ್ದರು.
ದೀಪಿಕಾ ಆಗಿ ಬದಲಾದ ದೀಪಕ್ ಈಗ 'ದೀಪಕ್' ದೀಪಿಕಾ ಆಗಿ ರೂಪಾಂತರಗೊಂಡಿದ್ದಾಳೆ. ದೀಪಿಕಾ ದೃಷ್ಟಿ ಇದೀಗ ಬಾಲಿವುಡ್ನತ್ತಾ ಹರಿಸಿದ್ದು, ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡುವುದು ನನ್ನ ಕನಸು ಎಂದಿದ್ದಾರೆ.
ದೀಪಿಕಾ ಆಗಿ ಬದಲಾದ ದೀಪಕ್