ಕರ್ನಾಟಕ

karnataka

ETV Bharat / bharat

ಆಪರೇಷನ್​ ಥಿಯೇಟರ್​ ಬಳಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾದ ಮಹಿಳಾ ನರ್ಸ್​!

ರಾಜಸ್ಥಾನದ ಜೋಧಪುರ್​ನಲ್ಲಿರುವ ಏಮ್ಸ್​ ಆಸ್ಪತ್ರೆಯ ಆಪರೇಷನ್​ ಥಿಯೇಟರ್​ ಬಳಿ ಮಹಿಳಾ ನರ್ಸ್​​ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಮಹಿಳಾ ನರ್ಸ್

By

Published : Jun 30, 2019, 3:02 AM IST

ಜೋಧಪುರ್​​:ರಾಜಸ್ಥಾನದ ಜೋಧಪುರ್​​ನಲ್ಲಿರುವ ಏಮ್ಸ್​ ಆಸ್ಪತ್ರೆಯ ಆಪರೇಷನ್ ಥಿಯೇಟರ್​ ಹೊರಗಡೆ ಮಹಿಳಾ ನರ್ಸ್​ಯೋರ್ವರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಕಳೆದೆರಡು ವರ್ಷಗಳಿಂದ ನರ್ಸ್​ ಆಗಿ ಕೇರಳ ಮೂಲದ ಬಿಜಿ ಪುನಾಸೆ ಇಲ್ಲಿನ ಏಮ್ಸ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ನರ್ಸ್​ ಬೆಂಕಿ ಹಂಚಿಕೊಂಡ ವೇಳೆ ಆಪರೇಷನ್​ ಥಿಯೇಟರ್​​ನಲ್ಲಿ ಶಸ್ತ್ರಚಿಕಿತ್ಸೆ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ. ಘಟನೆ ನಡೆಯುತ್ತಿದ್ದಂತೆ ಏಮ್ಸ್​​ ಆಡಳಿತ ವರ್ಗ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಶಾಸ್ತ್ರಿ ನಗರ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.

ಇನ್ನು ವೈದ್ಯರು ತಿಳಿಸಿರುವ ಪ್ರಕಾರ, ಕಳೆದ ಕೆಲ ತಿಂಗಳಿಂದ ಖಿನ್ನತೆಗೊಳಗಾಗಿದ್ದ ನರ್ಸ್​​, ಕುಟುಂಬದ ಸಮಸ್ಯೆಗಳಿಂದಾಗಿ ಇಂತಹ ಕ್ರಮ ಕೈಗೊಂಡಿರಬಹುದು ಎಂದು ತಿಳಿಸಿದ್ದಾರೆ. ಈ ಹಿಂದೆ ಕೂಡ ಏಮ್ಸ್​ ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿಯೋರ್ವರು ಆತ್ಮಹತ್ಯೆಗೆ ಶರಣಾಗಿದ್ದರು.

ABOUT THE AUTHOR

...view details