ನವದೆಹಲಿ: ದೇಶದ ಉದ್ಯೋಗ ಒದಗಿಸುವ ಮೂರು ಕ್ಷೇತ್ರಗಳಲ್ಲಿ ಮಹತ್ವದ ಬದಲಾವಣೆ ಆಗುತ್ತಿದ್ದು, ಕೃಷಿ ಕ್ಷೇತ್ರದ ಬದಲಿಗೆ ತಯಾರಿಕಾ ಮತ್ತು ಸೇವಾ ವಲಯಗಳತ್ತ ಹೆಚ್ಚಿನ ಉದ್ಯೋಗಿಗಳು ಮುಖಮಾಡುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಕೃಷಿ ಕ್ಷೇತ್ರಕ್ಕೆ ಡೆಡ್ಲೈನ್..! ಬೇಸಾಯ ತೊರೆದು ಸೇವಾ ಸೆಕ್ಟರ್ನತ್ತ ಉದ್ಯೋಗಿಗಳು -
ರಾಷ್ಟ್ರೀಯ ಮಾದರಿ ಸಮೀಕ್ಷಾ ಕಚೇರಿಯ (ಎನ್‌ಎಸ್‌ಎಸ್‌ಒ) ಇತ್ತೀಚಿನ ಸಮೀಕ್ಷಾ ವರದಿ ಅನ್ವಯ, ದೇಶದ ಬೃಹತ್ ಉದ್ಯೋಗ ನೆಲೆಯಾದ ಕೃಷಿ ಕ್ಷೇತ್ರ ವರ್ಷದಿಂದ ವರ್ಷಕ್ಕೆ ಕುಗ್ಗುತ್ತಿದೆ. ಉದ್ಯೋಗಗಳು ಈ ವಲಯದಿಂದ ಉತ್ಪಾದನಾ ಮತ್ತು ಸೇವಾ ವಲಯಕ್ಕೆ ಪಲಾಯನ ಮಾಡುತ್ತಿದ್ದಾರೆ ಎಂದು ಎಚ್ಚರಿಸಿದೆ.

ದೇಶದ ಒಟ್ಟು ಉದ್ಯೋಗಗಳಲ್ಲಿ ಶೇ 44ರಷ್ಟು ಪಾಲು ಕೃಷಿ ಕ್ಷೇತ್ರವೇ ಹೊಂದಿದೆ. ಆದರೆ, ನಿವ್ವಳ ಮೌಲ್ಯ ಸೇರ್ಪಡೆ (ಜಿವಿಎ) ಶೇ 16ರಷ್ಟು ಇದೆ. ಉಳಿದ ಶೇ 31ರಷ್ಟು ಉದ್ಯೋಗಿಗಳು ಸೇವಾ ವಲಯಕ್ಕೆ ಶೇ 54ರಷ್ಟು ಜಿವಿಎ ಬೆಳವಣಿಗೆಗೆ ಕಾರಣವಾಗಿದ್ದಾರೆ. ಉದ್ಯಮ ಕ್ಷೇತ್ರದಲ್ಲಿ ಶೇ 28ರಷ್ಟು ಉದ್ಯೋಗಗಳ ಜಿವಿಎ ಪಾಲು ಶೇ 30ರಷ್ಟಿದೆ ಎಂದು ಸಮೀಕ್ಷೆ ತಿಳಿಸಿದೆ.