ಹೈದರಾಬಾದ್:ಭಾರತದಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡ ಬಳಿಕ ಲಾಕ್ಡೌನ್ ಹೇರಿದ್ದೇ ತಡ ಆರ್ಥಿಕತೆ ಮೇಲೆ ಅತ್ಯಂಕ ಕೆಟ್ಟ ಪರಿಣಾಮ ಬೀರಿತು. ಅದರ ನೇರ ಪರಿಣಾಮ ಬೀರಿದ್ದು, ನಿರುದ್ಯೋಗ ಮತ್ತು ಬಡತನದ ಮೇಲೆ. 11 ಕೋಟಿ ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಆಗ ಕೆಲ ಸಂಸ್ಥೆಗಳು ನಡೆಸಿದ ಸಮೀಕ್ಷೆಯಲ್ಲೂ ಬೆಳಕಿಗೆ ಬಂದಿತ್ತು.
ಕೋವಿಡ್-19 ತಂದಿಟ್ಟ ಸಮಸ್ಯೆಯಿಂದಾಗಿ ಈಗಾಗಲೇ ವಲಸಿಗರ ಪಾಡು ಹೇಳತೀರದಾಗಿದೆ. ಸರ್ಕಾರದ ಒಂದು ಕಣ್ಣಾಗಿ ಆರ್ಥಿಕ ಕ್ಷೇತ್ರವನ್ನು ಬದಲು ಮಾಡುತ್ತಿದ್ದ ಅವರು, ಪ್ರಸ್ತುತ ತಮ್ಮ ಬದುಕಿನ ಯಂತ್ರವನ್ನು ತಿರುಗಿಸಲು ನಾನಾ ರೀತಿಯಲ್ಲಿ ಕಷ್ಟಪಡುತ್ತಿದ್ದಾರೆ. ವೈರಸ್ ಎಂದು ನಿಯಂತ್ರಣಕ್ಕೆ ಬರುತ್ತದೋ? ನಮ್ಮ ಜೀವನ ಸಹಜ ಸ್ಥಿತಿಗೆ ಎಂದು ಮರಳುತ್ತದೋ ಎಂಬ ಚಿಂತೆಯಲ್ಲೇ ಉಪವಾಸದ ದಿನಗಳನ್ನು ದೂಡುತ್ತಿದ್ದಾರೆ.
ಈಗ ಮತ್ತೊಂದು ಆತಂಕಕಾಗಿ ಅಂಶ ಬೆಳಕಿಗೆ ಬೆಂದಿದ್ದು, ಉದ್ಯೋಗದಲ್ಲಿ ಅಭೂತಪೂರ್ವ ಬಿಕ್ಕಟ್ಟು ಸೃಷ್ಟಿಯಾಗಲಿದೆ. ಅದು ಕೂಡ 2008ಕ್ಕೆ ಹೋಲಿಸಿದರೆ ತೀರಾ ಕೆಟ್ಟದ್ದಾಗಿದೆ. ಅದರಲ್ಲಿ ಕಡಿಮೆ ಆದಾಯ ಪಡೆಯುತ್ತಿದ್ದ ಮಹಿಳೆಯರು, ಯುವಕರು ಮತ್ತು ಕಾರ್ಮಿಕರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಲಿದ್ದಾರೆ. ಹೀಗಾಗಿ, ಮುಂದಿನ ದಿನಗಳಲ್ಲಿ ಬಡತನದ ದರ ಹೆಚ್ಚಾಗಲಿದೆ ಎಂದು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆಯು (ಒಇಸಿಡಿ) ತನ್ನ ವರದಿಯಲ್ಲಿ ತಿಳಿಸಿದೆ.
ಏಪ್ರಿಲ್ನಲ್ಲಿ ನಿರುದ್ಯೋಗದ ಪ್ರಮಾಣದಲ್ಲಿ ಅಭೂತಪೂರ್ವವಾಗಿ ಶೇ.3 ಪಾಯಿಂಟ್ ಏರಿಕೆ ಕಂಡಿತು. ಒಇಸಿಡಿ ನಿರುದ್ಯೋಗ ದರವು 2020ರ ಮೇ ಅಂತ್ಯಕ್ಕೆ ಶೇ 8.4ಕ್ಕೆ ಇಳಿಮುಖ ಕಂಡಿದೆ. ಏಪ್ರಿಲ್ನಲ್ಲಿ ಏರಿಕೆಯ ನಂತರ ಅದು ಶೇ8.5ಕ್ಕೆ ಬಂದು ನಿಂತಿದೆ. ಇದು ದಶಕದ ಅತಿ ಹೆಚ್ಚು ನಿರೋದ್ಯೋಗ ದರ ಇದಾಗಿದೆ. ಇದೇ ವರ್ಷ ಫೆಬ್ರವರಿಯಲ್ಲಿ ಅದು 5.2% ರಷ್ಟಿತ್ತು.
ಒಇಸಿಡಿ ಪ್ರದೇಶಗಳಲ್ಲಿ ನಿರುದ್ಯೋಗಿಗಳ ಸಂಖ್ಯೆ ಮೇ ತಿಂಗಳಲ್ಲಿ 54.5 ಮಿಲಿಯನ್ ಆಗಿತ್ತು. ಏಪ್ರಿಲ್ ಮತ್ತು ಮೇ ನಡುವಿನ ವ್ಯತ್ಯಾಸದ ಕೊರತೆಯು ವ್ಯತಿರಿಕ್ತ ಪ್ರವೃತ್ತಿಗಳ ಮೇಲೆ ಪರಿಣಾಮ ಬೀರಿದೆ. ಸದ್ಯ ಅಮೆರಿಕದಲ್ಲಿ ಸಹಜ ಸ್ಥಿತಿಗೆ ಮರಳಲು ಆರ್ಥಿಕ ಕ್ಷೇತ್ರಕ್ಕೆ ಚಾಲನೆ ನೀಡಲಾಗಿದೆ. ಆದರೆ, ಲಕ್ಷಗಟ್ಟಲೆ ಜನರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಈಗದು ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಸಾಮಾನ್ಯವಾಗಿದೆ.