ಕರ್ನಾಟಕ

karnataka

ETV Bharat / bharat

ವಿವಿಯನ್ನು ಉಪಕುಲಪತಿ ನಾಶ ಮಾಡುತ್ತಿದ್ದಾರೆ: ಪ್ರಧಾನಿಗೆ ಮುಕ್ತ ಪತ್ರ ಬರೆದ ಜೆಎನ್​ಯು ವಿದ್ಯಾರ್ಥಿ ಸಂಘ - ಉಪಕುಲಪತಿ ವಿರುದ್ಧ ಪ್ರಧಾನಿಗೆ ಪತ್ರ ಬರೆದ ಜೆಎನ್​ಯುಎಸ್​

ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಜೆಎನ್​ಯು ವಿದ್ಯಾರ್ಥಿ ಸಂಘ, ಉಪಕುಲತಿಯ ವಿರುದ್ಧ ಕಿಡಿಕಾರಿದೆ. ಉಪಕುಲಪತಿಗಳ ವೈಫಲ್ಯಗಳು ಮತ್ತು ದುರುಪಯೋಗಕ್ಕೆ ಪ್ರಧಾನಿ ಜವಾಬ್ದಾರರಾಗಿರಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

JNUSU writes to PM
ಪ್ರಧಾನಿಗೆ ಮುಕ್ತ ಪತ್ರ ಬರೆದ ಜೆಎನ್​ಯು ವಿದ್ಯಾರ್ಥಿ ಸಂಘ

By

Published : Nov 12, 2020, 5:13 PM IST

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಗೆ ಮುಕ್ತ ಪತ್ರ ಬರೆದಿರುವ ಜವಹರಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘ ( ಜೆಎನ್​ಯುಎಸ್​ಯು), ಉಪಕುಲಪತಿ ಎಂ.ಜಗದೀಶ್​ ಕುಮಾರ್​ನ್ನು ಯಾಕೆ ನೇಮಕ ಮಾಡದ್ದೀರಿ..? ಅವರು ವಿವಿಯನ್ನು ನಾಶ ಮಾಡುತ್ತಿದ್ದಾರೆ ಎಂದು ಆರೋಪಿಸಿದೆ.

ವಿವಿ ಆವರಣದಲ್ಲಿ ಸ್ಥಾಪಿಸಲಾಗಿರುವ ಸ್ವಾಮೀ ವಿವೇಕಾನಂದ ಪುತ್ಥಳಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಉದ್ಘಾಟಿಸಿದರು. ಇದಕ್ಕೂ ಮೊದಲು ವಿದ್ಯಾರ್ಥಿ ಸಂಘ ಮುಕ್ತ ಪತ್ರ ಬರೆದಿದೆ. ನೋಬೆಲ್​ ಪುರಸ್ಕತರನ್ನು ಸೃಷ್ಟಿಸುವ ವಿಶ್ವ ವಿದ್ಯಾನಿಯಲಯಕ್ಕೆ ಎಂ.ಜಗದೀಶ್ ಕುಮಾರ್​ ಅವರನ್ನು ಯಾಕೆ ಉಪಕುಲಪತಿಯಾಗಿ ನೇಮಕ ಮಾಡಿದ್ದೀರಿ..?. ಅವರು ವಿವಿಯ ಒಂದು ಕಲ್ಲು ಬಿಡದಂತೆ ನಾಶ ಮಾಡುತ್ತಾರೆ ಎಂದಿದೆ. ​

ನೀವು ಜೆಎನ್​ಯುನಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದೀರಿ ಎಂಬ ಮಾಹಿತಿಯಿಂದ ಈ ಪತ್ರ ಬರೆಯುತ್ತಿದ್ದೇವೆ. ನಾವು ಜೆಎನ್‌ಯು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳ ಚುನಾಯಿತ ಪ್ರತಿನಿಧಿಗಳಾಗಿದ್ದೇವೆ ಮತ್ತು ನಮ್ಮ ಚುನಾವಣೆಯನ್ನು ಗೌರವಾನ್ವಿತ ದೆಹಲಿ ಹೈಕೋರ್ಟ್ 17 ಸೆಪ್ಟೆಂಬರ್ 19 ರ ತೀರ್ಪಿನಲ್ಲಿ ಎತ್ತಿ ಹಿಡಿದಿದೆ. ನಿಮ್ಮ ಸರ್ಕಾರವು ನೇಮಕ ಮಾಡಿದ ಉಪಕುಲಪತಿಗಳು ಪ್ರಜಾಪ್ರಭುತ್ವ ಪ್ರಕ್ರಿಯೆ ಅನುಸರಿಸಲು ವಿಫಲರಾಗಿದ್ದಾರೆ. ಈ ಬಗ್ಗೆ ತಿಳಿಸಲು ನಾವು ವಿಷಾಧಿಸುತ್ತೇವೆ ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ವಿದ್ಯಾರ್ಥಿ ಸಂಘ ಉಲ್ಲೇಖಿಸಿದೆ.

ಉಪಕುಲಪತಿಗಳ ನಡೆಯನ್ನು ಬೆಂಬಲಿಸಿ ಇಂದು ನೀವು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ನಮಗೆ ಗೊತ್ತಿದೆ. ಉಪಕುಲಪತಿಗಳ ವೈಫಲ್ಯಗಳು ಮತ್ತು ದುರುಪಯೋಗಕ್ಕೆ ಪ್ರಧಾನಿ ಜವಾಬ್ದಾರರಾಗಿರಬೇಕು ಎಂದು ವಿದ್ಯಾರ್ಥಿ ಸಂಘ ಹೇಳಿದೆ.

ಕಳೆದ ಹಲವು ತಿಂಗಳಿನಿಂದ ಜೆಎನ್‌ ವಿದ್ಯಾರ್ಥಿ ಸಂಘ ಉಪಕುಲಪತಿಯೊಂದಿಗೆ ಶೀತಲ ಸಮರ ನಡೆಸುತ್ತಿದೆ. ಜನವರಿ 5 ರಂದು ಜೆಎನ್‌ಯು ಕ್ಯಾಂಪಸ್​ನಲ್ಲಿ ನಡೆದ ಹಿಂಸಾತ್ಮಕ ಘಟನೆಯ ಬಳಿಕ, ಉಪಕುಲಪತಿ ಎಂ.ಜಗದೇಶ್ ಕುಮಾರ್ ರಾಜೀನಾಮೆ ನೀಡುವಂತೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಹಳೆಯ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದರು.

For All Latest Updates

ABOUT THE AUTHOR

...view details