ಕರ್ನಾಟಕ

karnataka

ETV Bharat / bharat

ಮಿತಿಮೀರಿದ ಜೆಎನ್​​ಯು ವಿದ್ಯಾರ್ಥಿಗಳ ಹೋರಾಟ.. ಉಪಕುಲಪತಿ ಕಾರಿಗೆ ಕಲ್ಲು ತೂರಾಟ.. - ಜವಾಹರಲಾಲ್​ ನೆಹರೂ ವಿಶ್ವವಿದ್ಯಾಲಯ

15-20 ವಿದ್ಯಾರ್ಥಿಗಳ ಗುಂಪೊಂದು ಉಪಕುಲಪತಿ ಜಗದೀಶ್​ ಅವರ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಅವರ ಕಾರಿನ ಮುಂಭಾಗದ ಗಾಜು ಜಖಂಗೊಂಡಿದೆ. ಬಳಿಕ ಕ್ಯಾಂಪಸ್​ ಆವರಣದಲ್ಲಿದ್ದ ಭದ್ರತಾ ಸಿಬ್ಬಂದಿ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು.

JNU VC says students tried to attack him on campus
JNU VC says students tried to attack him on campus

By

Published : Dec 14, 2019, 8:35 PM IST

ನವದೆಹಲಿ: ಹಾಸ್ಟೆಲ್​ ಶುಲ್ಕ ಹೆಚ್ಚಳ ವಿರೋಧಿಸಿ ಜವಾಹರಲಾಲ್​ ನೆಹರೂ ವಿಶ್ವವಿದ್ಯಾಲಯದ (ಜೆಎನ್​ಯು) ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದಿದೆ. ಇಂದು ವಿವಿ ಉಪ ಕುಲಪತಿ ಮಾಮಿಡಾಳ ಜಗದೀಶ್​ಕುಮಾರ್​ ಅವರ ಕಾರಿನ ಮೇಲೆ ವಿದ್ಯಾರ್ಥಿಗಳು ಕಲ್ಲು ತೂರಾಟ ನಡೆಸಿದ್ದಾರೆ.

15-20 ವಿದ್ಯಾರ್ಥಿಗಳ ಗುಂಪೊಂದು ಉಪಕುಲಪತಿ ಜಗದೀಶ್​ ಅವರ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಅವರ ಕಾರಿನ ಮುಂಭಾಗದ ಗಾಜು ಜಖಂಗೊಂಡಿದೆ. ಬಳಿಕ ಕ್ಯಾಂಪಸ್​ ಆವರಣದಲ್ಲಿದ್ದ ಭದ್ರತಾ ಸಿಬ್ಬಂದಿ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು.

ಪರೀಕ್ಷೆಗಳು ನಡೆಯುತ್ತಿದ್ದ ಸಲುವಾಗಿ ಪರಿಶೀಲನೆಗಾಗಿ ಅಲ್ಲಿಗೆ ಹೋಗಿದ್ದೆ. ಬಳಿಕ ಆಡಳಿತ ವಿಭಾಗದ ಕಟ್ಟಡದತ್ತ ಹಿಂದಿರುಗಿದಾಗ 15-20 ವಿದ್ಯಾರ್ಥಿಗಳ ಗುಂಪು ಸುತ್ತುವರಿದು ದಾಳಿ ನಡೆಸಿತು. ಆದರೆ, ವಿವಿ ಭದ್ರತಾ ಸಿಬ್ಬಂದಿ, ಪೊಲೀಸರು ನನ್ನನ್ನು ರಕ್ಷಿಸಿದರು ಎಂದು ಉಪ ಕುಲಪತಿ ಜಗದೀಶ್​ ಕುಮಾರ್​ ಘಟನೆ ವಿವರಿಸಿದರು.

ABOUT THE AUTHOR

...view details