ಕರ್ನಾಟಕ

karnataka

ETV Bharat / bharat

JNU ಆನ್‌ಲೈನ್‌ ಪ್ರವೇಶ ಪರೀಕ್ಷೆಗೆ ವಿರೋಧ : ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ವೇಳೆ ಹೈಡ್ರಾಮಾ.. - ಕುಲಪತಿ ಎಂ ಜಗದೀಶ್​ ಕುಮಾರ್

ಜೆಎನ್​ಯು ವಿದ್ಯಾರ್ಥಿಗಳು ಕುಲಪತಿಗಳ ಮನೆಗೆ ನುಗ್ಗಿ, ಅವರ ಪತ್ನಿಯನ್ನು ಗೃಹಬಂಧನದಲ್ಲಿರಿಸಿದರು ಎಂದು ಕುಲಪತಿ ಎಂ.ಜಗದೀಶ್​ ಕುಮಾರ್ ಆರೋಪ ಮಾಡಿದ್ದಾರೆ.

ಜೆಎನ್​ಯು ವಿದ್ಯಾರ್ಥಿಗಳು ಮನೆಗೆ ನುಗ್ಗಿ ದಾಂದಲೆ ಮಾಡಿದರು ಎಂದು ಆರೋಪಿಸಿದ ಕುಲಪತಿ ಎಂ ಜಗದೀಶ್​ ಕುಮಾರ್​

By

Published : Mar 26, 2019, 9:51 AM IST

ನವದೆಹಲಿ: ಆನ್​ಲೈನ್​ ಪ್ರವೇಶ ಪರೀಕ್ಷೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಜೆಎನ್​ಯು ವಿದ್ಯಾರ್ಥಿಗಳು ಏಕಾಏಕಿ ಕುಲಪತಿಗಳ ಮನೆಗೆ ನುಗ್ಗಿ, ಅವರ ಪತ್ನಿಯನ್ನು ಕೆಲ ಗಂಟೆಗಳ ಕಾಲ ಗೃಹಬಂಧನದಲ್ಲಿರಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಜವಹರ​ಲಾಲ್​ ನೆಹರು ವಿಶ್ವವಿದ್ಯಾಲಯದ ಕುಲಪತಿ ಎಂ.ಜಗದೀಶ್​ ಕುಮಾರ್​ ಇಂತಹ ಆರೋಪ ಮಾಡಿದ್ದಾರೆ. ನಿನ್ನೆ ತಾವು ಮೀಟಿಂಗ್​ಗೆಂದು ತೆರಳಿದ್ದಾಗ ನೂರಾರು ವಿದ್ಯಾರ್ಥಿಗಳು ಮನೆಗೆ ನುಗ್ಗಿ, ದಾಂಧಲೆ ಮಾಡಿದ್ದಾರೆ ಎಂದು ಆಪಾದನೆ ಮಾಡಿದ್ದಾರೆ.

ಜೆಎನ್​ಯು ವಿದ್ಯಾರ್ಥಿಗಳು ಮನೆಗೆ ನುಗ್ಗಿ ದಾಂದಲೆ ಮಾಡಿದರು ಎಂದು ಆರೋಪಿಸಿದ ಕುಲಪತಿ ಎಂ. ಜಗದೀಶ್​ ಕುಮಾರ್​

ಮೀಟಿಂಗ್​ಗೆಂದು ತೆರಳಿದ್ದ ನಾನು ಸಂಜೆ 6 ಗಂಟೆ ವೇಳೆಗೆ ಮನೆಗೆ ಹಿಂದಿರುಗಿದಾಗ 400-500 ವಿದ್ಯಾರ್ಥಿಗಳು ಮನೆಗೆ ಮುಂದೆ ನಿಂತಿದ್ದರು. ಅವರೆಲ್ಲ ಗೇಟ್​ ಮುರಿದು ಒಳಗೆ ನುಗ್ಗಿದ್ದರು. ಈ ವೇಳೆ ಮನೆಯಲ್ಲಿ ನನ್ನ ಹೆಂಡತಿ ಒಬ್ಬಳೇ ಇದ್ದಳು. ಮನೆಯ ಮುಂದೆ ಅಷ್ಟೊಂದು ಜನ ಸೇರಿದ್ದಾಗ ಒಂಟಿ ಮಹಿಳೆ ಎಷ್ಟು ಹೆದರಿರಬೇಡ ನೀವೇ ಯೋಚಿಸಿ. ಇದರಿಂದ 3 ಗಂಟೆಗಳಿಗೂ ಹೆಚ್ಚು ಕಾಲ ಆಕೆ ಗೃಹಬಂಧನದಲ್ಲಿರುವಂತಾಯ್ತು. ಇದು ಪ್ರತಿಭಟನೆ ಮಾಡುವ ವಿಧಾನವೇ? ಎಂದು ಪ್ರಶ್ನಿಸಿದ್ದಾರೆ. ಇದೆಲ್ಲದರಿಂದ ಆತಂಕಗೊಂಡಿದ್ದ ಕುಲಪತಿ ಅವರ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ತಿಳಿದುಬಂದಿದೆ.

ಆದರೆ, ವಿದ್ಯಾರ್ಥಿಯೊಬ್ಬ ಈ ಆರೋಪ ಅಲ್ಲಗಳೆದಿದ್ದು, ನಾವು ಕುಲಪತಿಗಳನ್ನು ಭೇಟಿ ಮಾಡಲೆಂದು ಅವರ ಮನೆಗೆ ತೆರಳಿದ್ದೆವು. ಆದರೆ, ಅಲ್ಲಿ ಭದ್ರತಾ ಸಿಬ್ಬಂದಿ ನಮ್ಮ ಮೇಲೆ ಹಲ್ಲೆ ಮಾಡಿದರು. ಘಟನೆಯಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎನ್​. ಸಾಯಿ ಬಾಲಾಜಿ ಸೇರಿ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.

ಪ್ರವೇಶ ಪರೀಕ್ಷೆಯಲ್ಲಿ ಆನ್​ಲೈನ್​ ವ್ಯವಸ್ಥೆ ವಿರೋಧಿಸಿ ಕಳೆದೊಂದು ವಾರದಿಂದ 7 ವಿದ್ಯಾರ್ಥಿಗಳು ಜೆಎನ್‌ಯುನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ABOUT THE AUTHOR

...view details