ಕರ್ನಾಟಕ

karnataka

ETV Bharat / bharat

ಮುಖಕ್ಕೆ ಮಾಸ್ಕ್ ಧರಿಸಿ ಜೆಎನ್​ಯು ವಿದ್ಯಾರ್ಥಿ, ಶಿಕ್ಷಕರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ! - attack on students in JNU

ಮುಖವಾಡ ಧರಿಸಿಕೊಂಡು ಬಂದ ದುಷ್ಕರ್ಮಿಗಳ ಗುಂಪೊಂದು ದೆಹಲಿಯ ಜವಹರಲಾಲ್​ ನೆಹರೂ ವಿಶ್ವವಿದ್ಯಾಲಯದ ಕ್ಯಾಂಪಸ್​ಗೆ ನುಗ್ಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮೇಲೆ ಹಲ್ಲೆ ನಡೆಸಿದೆ.

JNU students attacked by goons wearing masks
ಮುಖಕ್ಕೆ ಮಾಸ್ಕ್ ಧರಿಸಿ ಜೆಎನ್​ಯು ವಿದ್ಯಾರ್ಥಿಗಳ ಮೇಲೆ ಹಲ್ಲೆ

By

Published : Jan 5, 2020, 11:09 PM IST

ನವದೆಹಲಿ:ಮುಖವಾಡ ಧರಿಸಿಕೊಂಡು ಬಂದ ದುಷ್ಕರ್ಮಿಗಳ ಗುಂಪೊಂದು ದೆಹಲಿಯ ಜವಹರಲಾಲ್​ ನೆಹರೂ ವಿಶ್ವವಿದ್ಯಾಲಯದ ಕ್ಯಾಂಪಸ್​ಗೆ ನುಗ್ಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮೇಲೆ ಹಲ್ಲೆ ನಡೆಸಿದೆ.

ಇಂದು ಸಂಜೆ ವೇಳೆ ಈ ಘಟನೆ ನಡೆದಿದ್ದು, ಜೆಎನ್​ಯು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಸೇರಿದಂತೆ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಈ ವೇಳೆ ಏನಿದು? ಯಾರು ನೀವು? ಹಿಂದಕ್ಕೆ ಹೋಗಿ, ವಿದ್ಯಾರ್ಥಿ ಸಂಘಟೆನಯೊಂದಕ್ಕೆ ಗೋ ಬ್ಯಾಕ್​ ಎನ್ನುವ ಧ್ವನಿ ಹಲ್ಲೆ ನಡೆಯುವಾಗ ಚಿತ್ರೀಕರಣಗೊಂಡ ವಿಡಿಯೋದಲ್ಲಿ ಕೇಳುತ್ತಿದೆ.

ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಐಷೆ ಘೋಷ್​ ಘಟನೆಯಿಂದ ಗಂಭೀರವಾಗಿ ಗಾಯಗೊಂಡಿದ್ದು, ನನ್ನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಗಿದೆ ಎಂದು ಹೇಳಿದ್ದಾರೆ. ವಿದ್ಯಾರ್ಥಿಗಳು ಸೇರಿ ಘಟನೆಯಿಂದ ಗಾಯಗೊಂಡ ಸುಮಾರು 18 ಜನರನ್ನು ಏಮ್ಸ್​ ಆಸ್ಪತ್ರೆಗೆ ಸೇರಿಸಲಾಗಿದೆ.

ಘಟನೆ ನಡೆದ ತಕ್ಷಣ ವಿವಿ ಆವರಣ ಹಾಗೂ ಸುತ್ತಮುತ್ತ ಬಿಗಿ ಪೊಲೀಸ್​ ಬಂದೋಬಸ್ತ್​ ಕೈಗೊಳ್ಳಲಾಗಿದೆ. ಘಟನೆ ಸಂಬಂಧ ಉನ್ನತ ತನಿಖೆ ನಡೆಸಲಾಗುತ್ತಿದೆ.

ABOUT THE AUTHOR

...view details