ನವದೆಹಲಿ: ಇಲ್ಲಿನ ಪ್ರತಿಷ್ಠಿತ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಹಾಗೂ ಆ ಘಟನೆ ಬಗೆಗಿನ ತನಿಖೆ ಬಗ್ಗೆ ದೆಹಲಿ ಪೊಲೀಸರಿಗೆ ಅಲ್ಲಿನ ಹೈಕೋರ್ಟ್ ಸಮನ್ಸ್ ಜಾರಿ ಮಾಡಿದೆ.
ಈ ಸಂಬಂಧ ಸಲ್ಲಿಕೆಯಾದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಆರ್ಎಸ್ಎಸ್ನ ಸಂಘಟನೆಗಳು ಹಾಗೂ ಎಡ ಸಂಘಟನೆಗಳ ವಿರುದ್ಧ ಹೋರಾಡುವ ಸಂಘಟನೆಗಳು ಹಾಗೂ ಇತರರ ಮೊಬೈಲ್ ಫೋನ್ ಹಾಗೂ ಅವರ ಬಳಕೆ ಮಾಡುತ್ತಿರುವ ವಾಟ್ಸ್ಆ್ಯಪ್ ಗ್ರೂಪ್ಗಳನ್ನ ಸೀಜ್ ಮಾಡಿರುವ ಕುರಿತು ಹಾಗೂ ಘಟನೆಯ ಸಾಕ್ಷ್ಯಗಳನ್ನ ನೀಡುವಂತೆ ಸಮನ್ಸ್ ಜಾರಿ ಮಾಡಿದೆ.